ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಮಾ.1 ರಿಂದ ಮಾ.3 ರ ವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ದೇವಸ್ಥಾನದ ವಠಾರದಲ್ಲಿ ನಡೆಯಿತು.
ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ತುಡರ್ ಯುವಕ ಮಂಡಲ ಕಾವು ಇದರ ಸ್ಥಾಪಕ ಅಧ್ಯಕ್ಷರಾದ ಸುಬ್ರಾಯ ಬಲ್ಯಾಯ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾದ ದಿವ್ಯನಾಥ ಶೆಟ್ಟಿ, ಅರಿಯಡ್ಕ ಗ್ರಾಮಪಂಚಾಯತ್ ಸದಸ್ಯರಾದ ಲೋಕೇಶ್ ಚಾಕೋಟೆ, ಅಯ್ಯಪ್ಪ ಭಜನಾ ಮಂದಿರದ ಸ್ಥಾಪಕಾಧ್ಯಕ್ಷರಾದ ಸುಂದರ ಪೂಜಾರಿ ಕೆರೆಮಾರು, ಉದ್ಯಮಿಗಳಾದ ಹರೀಶ್ ಕುಂಜತ್ತಾಯ, ರವಿಪ್ರಸಾದ್ ರೈ, ಕಾವು ನವೋದಯ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರಾದ ಚಿದಾನಂದ ಆಚಾರ್ಯ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಈಶ್ವರಮಂಗಲ ವಲಯಾಧ್ಯಕ್ಷ ಶಿವರಾಮ ಪೂಜಾರಿ ಕೆರೆಮಾರು, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸಂಘಟನಾ ಕಾರ್ಯದರ್ಶಿ ಕಾಳಿಕಾಂಬ ಜುವೆಲ್ಲರ್ಸ್ ನ ಮಾಲಕಅವಿನಾಶ್ ಆಚಾರ್ಯ, ಮುತ್ತುಮಾರಿಯಮ್ಮ ದೇವಸ್ಥಾನದ ಅಧ್ಯಕ್ಷರಾದ ಬಾಲಕೃಷ್ಣ ಪಿ, ಕಾರ್ಯದರ್ಶಿ ಕಿಶೋರ್ ಇವರುಗಳು ಉಪಸ್ಥಿತರಿದ್ದು ಶುಭಹಾರೈಸಿದರು.
ಊರಿನ ಭಕ್ತಾದಿಗಳು ಭಾಗವಹಿಸಿದ್ದ ಕಾರ್ಯಕ್ರಮವನ್ನು ಸುದೀಂದ್ರರವರು ನಿರ್ವಹಿಸಿದರು.