ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಮೋದೀಜಿಯವರಿಗೆ ವೈಜ್ಞಾನಿಕ ಮಾದರಿಯನ್ನು ವಿವರಿಸಿದ ಅಚಲ್ ಬಿಳಿನೆಲೆ

ಶೇರ್ ಮಾಡಿ

ಜನವರಿ 29ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದ ಜವಾಹರ್ ನವೋದಯ ವಿದ್ಯಾಲಯ ಮುಡಿಪು ಇಲ್ಲಿನ ವಿದ್ಯಾರ್ಥಿಗಳು ತಯಾರಿಸಿದ ವೈಜ್ಞಾನಿಕ ಮಾದರಿ ಚಂದ್ರಯಾನ -3 ಯನ್ನು ದೇಶದ ಪ್ರಧಾನಿ ಮೋದೀಜಿಯವರಿಗೆ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಳ್ಯದ ಅಚಲ್ ಬಿಳಿನೆಲೆಯವರು ವಿವರಿಸಿದ ಕ್ಷಣ.

ವೈಜ್ಞಾನಿಕ ಮಾದರಿಯನ್ನು ವೀಕ್ಷಿಸುತ್ತಾ ಬಂದ ಪ್ರಧಾನಿಗಳಿಗೆ “ಪ್ರಣಾಮ್ ಮಹೋದಯ್ , ಮೇ ಅಚಲ್ ಬಿಳಿನೆಲೆ (ನಮಸ್ತೆ ಮಹೋದಯ, ನಾನು ಅಚಲ್ ಬಿಳಿನೆಲೆ) ಎಂದು ಕಲಿಯುತ್ತಿರುವ ಸಂಸ್ಥೆಯ ಬಗ್ಗೆ ಹೇಳಿ ತನ್ನನ್ನು ಪರಿಚಯಿಸಿಕೊಂಡಾಗ – ಅವರು ಆರಂಭದಲ್ಲಿ “ಚಂದ್ರಯಾನ್ ಕೋ ಯಂಹೀ ಉತಾರ್ ವ ರಹೇ ಹೋ ಕ್ಯಾ?” (ಚಂದ್ರಯಾನವನ್ನು ಇಲ್ಲೆ ಇಳಿಸುತ್ತಿದ್ದೀರಾ?) ಎಂದು ಪ್ರೀತಿಯಿಂದ ನಗುತ್ತಾ ಮಾತನಾಡಿಸಿದ್ದನ್ನು ಕಾರ್ಯಕ್ರಮದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಅಚಲ್ ಬಿಳಿನೆಲೆ ನೆನಪಿಸಿಕೊಳ್ಳುತ್ತಾರೆ.

Leave a Reply

error: Content is protected !!