ಫೆ.13ರಂದು ನೆಲ್ಯಾಡಿ ಸೀನಿಯರ್ ಚೇಂಬರ್ ಲಿಜನ್ ಗೆ ರಾಷ್ಟ್ರೀಯ ಅಧ್ಯಕ್ಷರ ಭೇಟಿ

ಶೇರ್ ಮಾಡಿ

ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಲಿಜನ್ ಗೆ ಫೆ.13 ರಂದು ರಾಷ್ಟ್ರೀಯ ಅಧ್ಯಕ್ಷರಾದ Snr.CsL.ಪ್ರೊಫೆಸರ್ ವರ್ಗೀಸ್ ವೈದ್ಯನ್ ರವರು ಅಧಿಕೃತವಾಗಿ ಭೇಟಿ ನೀಡಲಿದ್ದಾರೆ.

ರಾಷ್ಟೀಯ ಅಧ್ಯಕ್ಷರ ಬೇಟಿಯ ಸಂದರ್ಭ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲಿಜನ್ ನ ವತಿಯಿಂದ ಬಲ್ಯ ಉಮಾಮಹೇಶ್ವರಿ ದೇವಸ್ಥಾನಕ್ಕೆ ಸ್ವಾಗತ ಫಲಕವನ್ನು, ಬಡ ರೋಗಿಗೆ ವೀಲ್ ಚಯರ್ ಹಸ್ತಾಂತರ, ಬಲ್ಯ ಪ್ರಾಥಮಿಕ ಶಾಲೆಗೆ ಲೈಬ್ರೇರಿಗೆ 122 ಪುಸ್ತಕಗಳನ್ನು ಹಾಗೂ ಶಾಲಾ ಮಕ್ಕಳ ಬಟ್ಟಲು ಇಡುವ ಸ್ಟಾಂಡ್, ಬಡ ಮಹಿಳೆಗೆ ಹೊಲಿಗೆ ಯಂತ್ರವನ್ನು, ಗೋಳಿತೊಟ್ಟು ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆಗೆ ಹೊಸ ಟ್ಯಾಂಕಿ, ಕೊಲ್ಯಟ್ಟು ಬಳಿ ಹೊಳೆ ಸ್ವಚ್ಛತೆ ಮೊದಲಾದ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ.

ಸಂಜೆ 7.00ಗಂಟೆಗೆ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಫೌಂಡೇಶನ್ ಗೆ 2 PPF ಹಾಗೂ 4ನೇ ಅವೃತ್ತಿಯ ಗೃಹ ಪತ್ರಿಕೆ ಅಭಿನಂದನ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳಾಗಿ ಪೂರ್ವ ರಾಷ್ಟ್ರೀಯ ಅಧ್ಯಕ್ಷರಾದ Snr.Csl.PPF.ಡಾ.ಕೇದಿಗೆ ಅರವಿಂದ ರಾವ್, ರಾಷ್ಟ್ರೀಯ ಉಪಾಧ್ಯಕ್ಷರಾದ Snr.PPF.ಜಿ.ಕೆ. ಹರಿಪ್ರಸಾದ್ ರೈ, ರಾಷ್ಟ್ರೀಯ ನಿರ್ದೇಶಕರಾದ G&D Snr.CsL.PPF.ಚಿತ್ರಕುಮಾರ್, CD ಉಪನಿರ್ದೇಶಕರಾದ Snr.PPF.ಡಾ.ಸದಾನಂದ ಕುಂದರ್, ನೆಲ್ಯಾಡಿ ಸೀನಿಯರ್ ಚೇಂಬರ್ ಲೀಜನ್ ನ ಸ್ಥಾಪಕ ಅಧ್ಯಕ್ಷರಾದ Snr.PPF.ಅಬ್ರಹಾಂ ವರ್ಗೀಸ್ ಭಾಗವಹಿಸಲಿದ್ದಾರೆ ಎಂದು ನೆಲ್ಯಾಡಿ ಸೀನಿಯರ್ ಚೇಂಬರ್ ಲೀಜನ್ ನ ಅಧ್ಯಕ್ಷರಾದ Snr.PPF.ನಾರಾಯಣ. ಎನ್ ಬಲ್ಯ ಪ್ರಕಟಣೆಯಲ್ಲಿ ತಿಳಿಸಿದರು.

Leave a Reply

error: Content is protected !!