ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕಾರ

ಶೇರ್ ಮಾಡಿ

ಉಜಿರೆ: ಮಂಗಳೂರಿನ ಶ್ರೀನಿವಾಸ ಯೂನಿವರ್ಸಿಟಿ ಹಾಗೂ ಸಮೂಹ ಸಂಸ್ಥೆಗಳ ಎ. ಶಾಮ ರಾವ್ ಪೌಂಡೇಶನ್ ವತಿಯಿಂದ ಸಂಸ್ಥಾಪಕರ ದಿನದ ಅಂಗವಾಗಿ ಕೊಡಮಾಡುವ ಎ. ಶಾಮ ರಾವ್ ಸ್ಮಾರಕ ಅವಿಭಜಿತ ದಕ್ಷಿಣಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ಇವರು ಮಂಗಳೂರಿನ ಮುಕ್ಕದ ಶ್ರೀನಿವಾಸ ಯೂನಿವರ್ಸಿಟಿಯಲ್ಲಿ ಸ್ವೀಕರಿಸಿದರು.

ಶ್ರೀನಿವಾಸ ಯೂನಿವರ್ಸಿಟಿಯ ಕುಲಪತಿ ಸಿಎ. ರಾಘವೇಂದ್ರ ರಾವ್, ಉಪ ಕುಲಪತಿ ಶ್ರೀನಿವಾಸ ರಾವ್, ಆಡಳಿತ ಮಂಡಳಿಯ ಟ್ರಸ್ಟಿಗಳಾದ ಎ.ವಿಜಯಲಕ್ಷ್ಮೀ ಆರ್ ರಾವ್ ಹಾಗೂ ಮಿತ್ರಾ ಎಸ್ ರಾವ್, ಅತಿಥಿಗಳಾದ ಬೆಂಗಳೂರಿನ ರಾಜೀವ ಗಾಂಧಿ ಹೆಲ್ತ್ ಸೈನ್ಸ್ ಇದರ ಸಿಂಡಿಕೇಟ್ ಸದಸ್ಯರಾದ ಯು.ಟಿ ಇಫ್ತಿಕರ್ ಅಲಿ, ಬ್ಯಾಂಕ್ ಆಫ್ ಮಹಾರಾಷ್ಟ್ರ ಇದರ ಕಾರ್ಯ ನಿರ್ವಾಹಕ ನಿರ್ದೇಶಕ ಆಶಿಷ್ ಪಾಂಡೆ, ಮೌಲ್ಯಮಾಪನ ರಿಜಿಸ್ಟ್ರಾರ್ ಶ್ರೀನಿವಾಸ ಮಯ್ಯ, ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯಸ್ಥ ಡಾ.ಎ.ಆರ್ ಶಬರಾಯ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಪ್ರಶಸ್ತಿ ನೀಡಿ ಗೌರವಿಸಿದರು.

Leave a Reply

error: Content is protected !!