ಹತ್ಯಡ್ಕ ಅರಿಕೆಗುಡ್ಡೆ ವನದುರ್ಗಾ ಕ್ಷೇತ್ರಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಭೇಟಿ

ಶೇರ್ ಮಾಡಿ

ಅರಸಿನಮಕ್ಕಿಯ ಹತ್ಯಡ್ಕ ಗ್ರಾಮದ ಆರಿಕೆಗುಡ್ಡೆ ವನದುರ್ಗಾ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸಂಪೂರ್ಣ ಶಿಲಾಮಯ ದೇವಸ್ಥಾನದ ದೇವರ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಫೆ.22ರಂದು ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಪಿಲಿಕ್ಕಬೆ, ಪ್ರಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಚಾಲಕರಾದ ವೃಷಾಂಕ್ ಖಾಡಿಲ್ಕರ್, ದೇವಸ್ಥಾನದ ಅರ್ಚಕರಾದ ಉಲ್ಲಾಸ್ ಭಟ್ ಅಂತರ ಮೊದಲಾದವರು ಉಪಸ್ಥಿತರಿದ್ದರು.

Leave a Reply

error: Content is protected !!