ನೆಲ್ಯಾಡಿ: ಯಕ್ಷಗಾನದ ಹಿರಿಯ ಕಲಾವಿದ ಜಾಲ್ಮನೆ ಕುಟುಂಬದ ಹಿರಿಯರು ದಿ.ಬಾಬು ಆಚಾರ್ಯ ಗೋಣಿಗುಡ್ಡೆ ರವರ ಉತ್ತರಕ್ರಿಯೆಯ ಪ್ರಯುಕ್ತ ಶ್ರೀ ಕಾಳಿಕಾಂಬ ಭಜನಾ ಮಂದಿರದಲ್ಲಿ ಸಮಾರಾಧನೆ ಮತ್ತು ಸಂಸ್ಮರಣೆ ಮತ್ತು ಯಕ್ಷಗಾನ ತಾಳಮದ್ದಲೆ ನೆರವೇರಿತ್ತು.
ಕಾರ್ಯಕ್ರಮದಲ್ಲಿ ನುಡಿ ನಮನಗಳನ್ನು ಸಲ್ಲಿಸಿದ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆರವರು ಮಾತನಾಡಿ ನಿಷ್ಕಳಂಕ ಮನಸ್ಸಿನ ಎಲ್ಲರನ್ನೂ ಪ್ರೀತಿಸುವ ಸ್ನೇಹಜೀವಿಯಾಗಿದ್ದರು ಯಕ್ಷಗಾನದ ಬಗ್ಗೆ ಅಪರಿಮಿತ ಪ್ರೀತಿಯನ್ನು ಹೊಂದಿರುವ ಶ್ರೀಯುತರು ಹಿರಿಯ ಭಾಗವತರಾಗಿದ್ದರು. ಜಾಲ್ಮನೆ ಕುಟುಂಬದ ಹಿರಿಯರಾಗಿ ಕಾಳಿಕಾಂಬ ಭಜನಾ ಮಂದಿರದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಎಲ್ಲರನ್ನು ಗೌರವಾದರಗಳಿಂದ ನೋಡಿಕೊಳ್ಳುತ್ತಿದ್ದರು, ಜಾತಿ ಮತ ಧರ್ಮವನ್ನು ಮೀರಿ ಎಲ್ಲರ ಪ್ರೀತಿ-ವಿಶ್ವಾಸಗಳನ್ನು ಗಳಿಸಿದರು ಎಂದರು.
ಕಾರ್ಯಕ್ರಮದಲ್ಲಿ ಜಾಲ್ಮನೆ ಕೇಶವ ಆಚಾರ್ಯ ಜಾಲ್ಮನೆ, ವಾಣಿಶ್ರೀ ದಯಾನಂದ ಆಚಾರ್ಯ, ಕೊಲ್ಯೊಟ್ಟು ರಾಮಣ್ಣ ಆಚಾರ್ಯ, ಉಪ್ಪಿನಂಗಡಿ ಕಾಳಿಕಾಂಬ ಯಕ್ಷಗಾನ ಮಂಡಳಿಯ ಹರೀಶ್ ಆಚಾರ್ಯ, ವಿನಾಯಕ ಯಕ್ಷಗಾನ ಮಂಡಳಿಯ ಅಧ್ಯಕ್ಷ ಜಯರಾಮಗೌಡ ನಾಲ್ಗೊತ್ತು ಕಾರ್ಯದರ್ಶಿ, ಕಿರಣ್ ಗೌಡ ಪುತ್ತಿಲ ಖ್ಯಾತ ಮದ್ದಲೆ ವಾದಕರಾದ ಜಯಪ್ರಕಾಶ್ ಬಾಲ್ತಿಲ್ಲಾಯ, ಕೊಕ್ಕಡ ಖ್ಯಾತ ಯಕ್ಷಗಾನ ಭಾಗವತರಾದ ಕುಸುಮಕರ ಆಚಾರ್ಯ ಹಳೆ ನೆರಂಕಿ, ಯಕ್ಷಗಾನ ಕಲಾವಿದ ದಿವಾಕರ ಆಚಾರ್ಯ, ಹಳೆನೇರಂಕಿ ಪ್ರಗತಿಪರ ಕೃಷಿಕ ರಮೇಶ್ ಗೌಡ ನಾಲ್ಗೊತ್ತು, ಧಾರ್ಮಿಕ ಮುಖಂಡರಾದ , ಧನಂಜಯ ಗೌಡ ಕೊಡಂಗೆ, ಶ್ರೀ ವಿನಾಯಕ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಅಮ್ಮಿ ಗೌಡ ನಾಲ್ಗೊತ್ತು, ನಾರಾಯಣ ಆಚಾರ್ಯ ಗೋಣಿಗುಡ್ಡೆ, ಕಾಳಿಕಾಂಬ ಭಜನಾ ಮಂಡಳಿಯ ಪದಾಧಿಕಾರಿಗಳಾದ ಮಾಧವ ಆಚಾರ್ಯ ಜಾಲ್ಮನೆ, ಅಶೋಕ ಆಚಾರ್ಯ ಚಾಲ್ಮನೆ, ಖ್ಯಾತ ಯಕ್ಷಗಾನ ಕಲಾವಿದ ತಿಮ್ಮಪ್ಪ ಗೌಡ, ಯಶೋಧರ ಗೌಡ ನಾಲ್ಗೊತ್ತು, ದಿ.ಬಾಬು ಆಚಾರ್ಯ ರವರ ಮಕ್ಕಳು,ಮೊಮ್ಮಕ್ಕಳು, ಅಭಿಮಾನಿಗಳು, ಗಣ್ಯರು ಜಾಲ್ಮನೆ ಕುಟುಂಬಸ್ಥರು ಭಾಗವಹಿಸಿದ್ದರು.
ಶ್ರೀ ವಿನಾಯಕ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಜಯರಾಮಗೌಡ ಸ್ವಾಗತಿಸಿದರು. ಕಾಳಿಕಾಂಬ ಯಕ್ಷಗಾನ ಮಂಡಳಿ ಉಪ್ಪಿನಂಗಡಿ ಕೋಶಾಧಿಕಾರಿ ಹರೀಶ್ ಆಚಾರ್ಯ ವಂದಿಸಿದರು.
ನಂತರ ವಿನಾಯಕ ಯಕ್ಷಗಾನ ಮಂಡಳಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳ ಮದ್ದಲೆ ಸುಧನ್ವ ಮೋಕ್ಷ ಯಕ್ಷಗಾನ ನಡೆಯಿತು. ಹಿಮ್ಮೇಳದಲ್ಲಿ ಕುಸುಮಕರ ಆಚಾರ್ಯ ಹಳನೇರಂಕಿ ಅಮ್ಮಿ ಗೌಡ ನಾಲ್ಗೊತ್ತು ಮದ್ದಲೆ ವಾದಕರಾಗಿ ಜಯಪ್ರಕಾಶ್ ಬಾಳ್ತಿಲ್ಲಯ, ಚೆಂಡೆ ವಾದಕರಾಗಿ ದಿವಾಕರ ಆಚಾರ್ಯ ಸಹಕರಿಸಿದ್ದರು. ಮುಮ್ಮೇಳದಲ್ಲಿ ಹಂಸದ್ವಜನಾಗಿ ಗಂಗಾಧರ ಶೆಟ್ಟಿ ಹೊಸಮನೆ, ಸುಧನ್ವನಾಗಿ ಕಿರಣ್ ಗೌಡ ಪುತ್ತಿಲ,ಹರೀಶ್ ಆಚಾರ್ಯ ಉಪ್ಪಿನಂಗಡಿ, ಶ್ರೀಕೃಷ್ಣನಾಗಿ ಜಯರಾಮಗೌಡ ನಾಲ್ಗೊತ್ತು, ಅರ್ಜುನರಾಗಿ ತಿಮ್ಮಪ್ಪ ಗೌಡ ಪುಳಿತಡಿ, ಶಂಖಾ ಲಿಖಿತರಾಗಿ ಅಮ್ಮಿ ಗೌಡ, ಜಯರಾಮ್ ಗೌಡ, ಪ್ರಭಾವತಿಯಾಗಿ ದಿವಾಕರ ಆಚಾರ್ಯ ಹಳೆನೇರಂಕಿ ಭಾಗವಹಿಸಿದರು.