ಕೊಕ್ಕಡ: ವೈದ್ಯನಾಥೇಶ್ವರ ರೆಸಿಡೆನ್ಸಿ ಬೋರ್ಡಿಂಗ್-ಲಾಡ್ಜಿಂಗ್, ಗೋಲ್ಡನ್ ಹಬ್ ಮಲ್ಟಿ ಕ್ಯುಸಿನ್ ಫ್ಯಾಮಿಲಿ ಬಾರ್ ಮತ್ತು ರೆಸ್ಟೋರೆಂಟ್ ಉದ್ಘಾಟನೆ

ಶೇರ್ ಮಾಡಿ

ವೈದ್ಯನಾಥೇಶ್ವರ ರೆಸಿಡೆನ್ಸಿ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಗೋಲ್ಡನ್ ಹಬ್ ಮಲ್ಟಿ ಕ್ಯುಸಿನ್ ಫ್ಯಾಮಿಲಿ ಬಾರ್ ಮತ್ತು ರೆಸ್ಟೋರೆಂಟ್ ಉದ್ಘಾಟನೆ ಯು ಫೆ.27ರಂದು ನಡೆಯಿತು.

ದೀಪ ಬೆಳಗಿಸುವ ಮೂಲಕ ಟಿ.ಮಾಯಿಲಪ್ಪ ಗೌಡ ಉದ್ಘಾಟಿಸಿ ಶುಭ ಹಾರೈಸಿದರು.
ಕೊಕ್ಕಡ ಸೈಂಟ್ ಜಾನ್ ಬ್ಯಾಪ್ಟಿಸ್ಟ್ ಚರ್ಚ್ ಧರ್ಮಗುರು ಫಾ| ಜಗದೀಶ್ ಪಿಂಟೋ ಆಶೀರ್ವಚನ ನೆರವೇರಿಸಿದರು. ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸಂಘ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹೆಚ್.ಪದ್ಮಗೌಡ, ಸೌಹಾರ್ದ ಕೊ-ಆಪರೇಟಿವ್‌ ಸೊಸೈಟಿ ಬೆಳ್ತಂಗಡಿ ಅಧ್ಯಕ್ಷ ಸತೀಶ್ ಕಾಶಿಪಟ್ನ, ಕೆ.ಎಂ.ಗಿರೀಶ್ ಕುಮಾರ್, ಉದ್ಯಮಿಗಳು ಹಕೀಂ ಕೊಕ್ಕಡ ಅಧ್ಯಕ್ಷರು ಯೂತ್ ಕಾಂಗ್ರೆಸ್ ಕೊಕ್ಕಡ, ಅರುಣ್ ರೆಬೆಲ್ಲೊ, ಟಿ.ಮಾಯಿಲಪ್ಪ ಗೌಡ ಮತ್ತು ಕುಟುಂಬಸ್ಥರು, ಕೆ.ಎಂ. ನಾಗೇಶ್ ಕುಮಾರ್, ಸುಧಾ ಪಿ. ಹಾಗೂ ಮಕ್ಕಳು, ಪ್ರವೀಣ್ ಫೆರ್ನಾಂಡಿಸ್, ಸವಿತಾ ಬ್ಯಾಪ್ಟಿಸ್ಟ್, ಫ್ರಾನ್ಸಿಸ್ ಫೆರ್ನಾಂಡಿಸ್, ಎಮಿಲ್ಡಾ ಫೆರ್ನಾಂಡಿಸ್, ಪದ್ಮನಾಭ ಸಾಲಿಯಾನ್, ಸಂತೋಷ್ ಗೌಡ ವಳಂಬ್ರ, ರಜತ ಗೌಡ, ವಿಶ್ವನಾಥ್ ಕೊಲ್ಲಾಜೆ, ಮಾಜಿ ಜಿ.ಪಂ ಸದಸ್ಯೆ ನಮಿತಾ, ಅಕ್ರಮ ಸಕ್ರಮ ಸಮಿತಿ ಸದಸ್ಯೆ ವಿನುತಾ ರಜತ ಗೌಡ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಮಾಜಿ ಅಧ್ಯಕ್ಷರಾದ ಸುಬ್ರಮಣ್ಯ ಶಬರಾಯ, ಸದಸ್ಯರಾದ ವಿಶ್ವನಾಥ್ ಶೆಟ್ಟಿ, ನಾಗೇಶ್ ಕಲಾಯಿ, ನಾರಾಯಣ ಗೌಡ, ಉಜಿರೆ ಗ್ರಾ.ಪಂ.ಸದಸ್ಯ ಅನಿಲ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.
ಶಿವಶಂಕರ ಗೇರುಕಟ್ಟೆ ಪ್ರಾರ್ಥಿಸಿದರು, ಕೆ.ಎಂ ನಾಗೇಶ್ ಕುಮಾರ್ ಸ್ವಾಗತಿಸಿದರು. ಗುರುರಾಜ್ ನಿರೂಪಿಸಿದರು.

Leave a Reply

error: Content is protected !!