ಬಿಗ್‌ ಬಾಸ್‌ ಕಾರ್ತಿಕ್‌ & ನಮೃತಾ ಗೌಡ ಮದುವೆ! ವೈರಲ್‌ ಆಯಿತು ಫೋಟೋಸ್‌..

ಶೇರ್ ಮಾಡಿ

ಬಿಗ್‌ ಬಾಸ್‌ ಸೀಸನ್‌ -10 ವಿನ್ನರ್‌ ಕಾರ್ತಿಕ್‌ ಮಹೇಶ್‌ ಹಾಗೂ ಸ್ಪರ್ಧಿ ನಮೃತಾ ಗೌಡ ಅವರ ಮದುವೆ ಲುಕ್‌ ವುಳ್ಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.!

ಬಿಗ್‌ ಬಾಸ್‌ ನಲ್ಲಿ ಕಾರ್ತಿಕ್‌ ಹಾಗೂ ಸಂಗೀತಾ ಆತ್ಮೀಯವಾಗಿದ್ದರು. ಆ ಬಳಿಕ ಇಬ್ಬರು ಪರಸ್ಪರ ಜಗಳ ಮಾಡಿಕೊಂಡು ದೂರವಾಗಿದ್ದರು. ಆ ಬಳಿಕ ಕಾರ್ತಿಕ್‌ ಜೊತೆ ಒಂದಷ್ಟು ದಿನ ಆತ್ಮೀಯವಾಗಿ ನಮೃತಾ ಗೌಡ ಇದ್ದರು. ಇಬ್ಬರು ಒಳ್ಳೆಯ ಸ್ನೇಹಿತರು. ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು.

ಬಿಗ್‌ ಬಾಸ್‌ ಮುಗಿದ ಬಳಿಕವೂ ಕಾರ್ತಿಕ್‌ ಹಾಗೂ ನಮೃತಾ ಸ್ನೇಹ ಹಾಗೆಯೇ ಇದೆ. ಇತ್ತೀಚೆಗೆ ಕಾರ್ತಿಕ್‌ ಹಾಗೂ ನಮೃತಾ ಗೌಡ ಅವರು ಜೊತೆಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ವಧು – ವರರಾಗಿ ಲುಕ್‌ ನಲ್ಲಿ ಇಬ್ಬರು ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಜಾಹೀರಾತಿನ ಫೋಟೋಗಳನ್ನು ನೋಡಿ ಕೆಲ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ.

ಕಾರ್ತಿಕ್‌ & ನಮೃತಾ ಮದುವೆ ಆಗಿದ್ದಾರೆ ಎನ್ನುವ ಮಾತುಗಳು ಹರಿದಾಡಿದೆ. ಅಸಲಿಗೆ ಇದೊಂದು ಜಾಹೀರಾತಿಗಾಗಿ ನಡೆದ ಫೋಟೋ ಶೂಟ್‌ ಆಗಿದೆ. ಇದರಲ್ಲಿ ನಟಿ ಪ್ರೇಮಾ ಕೂಡ ಕಾಣಿಸಿಕೊಂಡಿದ್ದಾರೆ.‌

ಜಾಹೀರಾತಿನ ಫೋಟೋಗಳನ್ನು ಸ್ಟೋರಿಯಾಗಿ ನಮೃತಾ ತನ್ನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ವೈರಲ್‌ ಆಗಿದೆ.

Leave a Reply

error: Content is protected !!