ನೆಲ್ಯಾಡಿ ಸುಂದರ ಶೆಟ್ಟಿಯವರು ಎಎಸ್‌ಐ ಆಗಿ ಭಡ್ತಿ-ಸುಳ್ಯ ಠಾಣೆಗೆ ವರ್ಗಾವಣೆ

ಶೇರ್ ಮಾಡಿ

ನೆಲ್ಯಾಡಿ:ಬೆಳ್ತಂಗಡಿ ನಗರ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೆಲ್ಯಾಡಿ ಗ್ರಾಮದ ಬೆದ್ರುಮಾರು ನಿವಾಸಿ ಸುಂದರ ಶೆಟ್ಟಿಯವರು ಎಎಸ್‌ಐ ಆಗಿ ಭಡ್ತಿಗೊಂಡು ಸುಳ್ಯ ನಗರ ಠಾಣೆಗೆ ವರ್ಗಾವಣೆಗೊಂಡು ಫೆ.29ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಸುಂದರ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಹಿರಿಯಡ್ಕ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ 1996ರಲ್ಲಿ ಸೇವೆಗೆ ಸೇರ್ಪಡೆಗೊಂಡಿದ್ದರು. ಬಳಿಕ ಮಂಗಳೂರು ಠಾಣೆಗೆ ವರ್ಗಾವಣೆಗೊಂಡಿದ್ದರು. ಹೆಡ್‌ಕಾನ್‌ಸ್ಟೇಬಲ್ ಆಗಿ 2014ರಲ್ಲಿ ಭಡ್ತಿಗೊಂಡು ಬಂಟ್ವಾಳ ಠಾಣೆಗೆ ವರ್ಗಾವಣೆಗೊಂಡಿದ್ದರು. ನಂತರ ಗುಪ್ತವಾರ್ತೆ, ಅರಣ್ಯ ಸಂಚಾರಿದಳದಲ್ಲಿ ಕರ್ತವ್ಯ ನಿರ್ವಹಿಸಿ ಬೆಳ್ತಂಗಡಿ ಠಾಣೆಗೆ ವರ್ಗಾವಣೆಯಾಗಿದ್ದರು. ಇದೀಗ ಎಎಸ್‌ಐ ಆಗಿ ಭಡ್ತಿಗೊಂಡು ಸುಳ್ಯ ಠಾಣೆಗೆ ವರ್ಗಾವಣೆಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸುಂದರ ಶೆಟ್ಟಿಯವರಿಗೆ ಅಪರಾಧ ಪತ್ತೆಗಾಗಿ ಜಿಲ್ಲಾ ಮಟ್ಟದ ಪ್ರಶಸ್ತಿಯೂ ಲಭಿಸಿತ್ತು.

Leave a Reply

error: Content is protected !!