ನೆಲ್ಯಾಡಿ ಗ್ರಾಮದ ರಾಮನಗರದ ಶ್ರೀರಾಮ ಮಂದಿರದಲ್ಲಿ ಶ್ರೀ ವಿನಾಯಕ ಭಜನಾ ಮಂಡಳಿಯ ವಾರ್ಷಿಕ ಭಜನಾ ಮಹೋತ್ಸವ. ಗಣಹೋಮ, ಅಶ್ವತಪೂಜೆ ಸಾಮೂಹಿಕ ಸತ್ಯನಾರಾಯಣ ಪೂಜೆ, ದುರ್ಗಾ ಪೂಜೆ, ಭಜನಾ ಕಾರ್ಯಕ್ರಮ ಮತ್ತು ಅನ್ನ ಸಂತರ್ಪಣೆ ನೆರವೇರಿತು.
ಶ್ರೀ ವಿನಾಯಕ ಯಕ್ಷಗಾನ ಮಂಡಳಿ ರಾಮನಗರ ಬಲ್ಯ ನೆಲ್ಯಾಡಿ ಮತ್ತು ಅತಿಥಿ ಕಲಾವಿದರ ಕೊಡುವಿಕೆಯಿಂದ ಯಕ್ಷಗಾನ ಕಲಾವಿದ ಅಮ್ಮಿ ಗೌಡ ನಾಲ್ಗೊತ್ತು ರವರ ಪ್ರಾಯೋಜಕತ್ವದಲ್ಲಿ ಯಕ್ಷವಾಗ್ – ವೈಭವ ಮತ್ತು ಸನ್ಮಾನ ಕಾರ್ಯಕ್ರಮ ನೆರವೇರಿತು.
ಅಧ್ಯಕ್ಷತೆಯನ್ನು ಶ್ರೀ ವಿನಾಯಕ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಜಯರಾಮ ಗೌಡ ನಾಲ್ಗೊತ್ತು ವಹಿಸಿದ್ದರು. ಯಕ್ಷಗಾನ ಕಲಾವಿದ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಮಾತನಾಡಿ ಕಳೆದ 35 ವರ್ಷಗಳಿಂದ ಈ ಸಾನಿಧ್ಯದಲ್ಲಿ ವಿನಾಯಕ ಯಕ್ಷಗಾನ ಮಂಡಳಿ ತಾಳ ಮದ್ದಲೆ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿರುವುದು ಆ ಕಲಾಮಾತೆಗೆ ಮಾಡಿದ ದೊಡ್ಡ ಸೇವೆಯಾಗಿದೆ ಆ ಮೂಲಕವಾಗಿ ಅನೇಕ ಯುವ ಕಲಾವಿದರನ್ನು ಪ್ರೋತ್ಸಾಹಿಸುವುದರ ಮೂಲಕ ಈ ಯಕ್ಷಗಾನ ಮಂಡಳಿ ದೊಡ್ಡ ಸಾಧನೆಯನ್ನು ಮಾಡಿದೆ ವಿಶೇಷವಾಗಿ ವಿನಾಯಕ ಯಕ್ಷಗಾನ ಮಂಡಳಿಯ ಯುವ ಕಲಾವಿದನಾಗಿ ತನ್ನ ಪ್ರಾಯೋಜಕತ್ವದ ಮೂಲಕ ಈ ಯಕ್ಷಗಾನ ಕಾರ್ಯಕ್ರಮವನ್ನು ಸಂಘಟಿಸಿ ಕಲಾವಿದರನ್ನು ಗೌರವಿಸಿ ಕಲಾವಿದರ ಬಗ್ಗೆ ಅಭಿಮಾನವನ್ನು ಇಟ್ಟು ಕೊಂಡು ಸೇವೆಯನ್ನು ಮಾಡುತ್ತಾ ಇರುವ ಅಮ್ಮಿ ಗೌಡರ ಕಾರ್ಯ ಶ್ಲಾಘನೀಯ ಎಂದರು ಅವರಿಗೆ ಇನ್ನಷ್ಟು ಕಲಾ ಸೇವೆಯನ್ನು ಮಾಡುವ ಯೋಗ ಭಾಗ್ಯ ಭಗವಂತ ಅನುಗ್ರಹಿಸಲಿ ಎಂದು ಶುಭ ಹಾರೈಸಿದರು.
ಖ್ಯಾತ ಚೆಂಡೆವಾದಕ ಕೀರ್ತಿ ಶೇಷ ದಿ.ಗೋಪಾಲಕೃಷ್ಣ ಶಗ್ರಿತ್ತಾಯ ಮತ್ತು ಜಾನಕಿ ಅಮ್ಮ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶಗ್ರಿತ್ತಾಯ, ಶ್ರೀರಾಮಕುಂಜೇಶ್ವರ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಗುಡ್ಡಪ್ಪ ಬಲ್ಯ, ಶ್ರೀ ವಿನಾಯಕ ಭಜನಾ ಮಂಡಳಿಯ ಕಾರ್ಯದರ್ಶಿ ರಾಧಾಕೃಷ್ಣ ಗೌಡ ಪುಣಸೆಬೆಟ್ಟು, ಪ್ರಗತಿಪರ ಕೃಷಿಕ ರಮೇಶ ಗೌಡ ನಾಲ್ಗೊತ್ತು ಭಾಗವಹಿಸಿದ್ದರು.
ಸನ್ಮಾನ:
ಖ್ಯಾತ ಚೆಂಡೆ ವಾದಕ ದಿ.ಸುಪ್ರಸನ್ನ ಶಗ್ರಿತ್ತಾಯ ಸ್ಮರಣಾರ್ಥ “ಯಕ್ಷ ಪ್ರಶಸ್ತಿ” ಖ್ಯಾತ ಭಾಗವತರಾದ ಕುಸುಮಕರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಕಲಾವಿದರಾದ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಯಕ್ಷಗಾನ ಭಾಗವತರಾದ ಶ್ರೀಮತಿ ಭವ್ಯಶ್ರೀ ಕುಲ್ಕುಂದ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಕಲಾವಿದ ಗಂಗಾಧರ ಶೆಟ್ಟಿ ಅಮೆತ್ತಿಮಾರುಗುತ್ತು ಮತ್ತು ಚಕ್ರತಾಳ ಕಲಾವಿದ ಪ್ರಕಾಶ್ ಗುರುವಾಯನಕೆರೆ ಅವರುಗಳನ್ನು ಗೌರವಾರ್ಪಣೆಯನ್ನು ಮಾಡಲಾಯಿತು.
ಯಕ್ಷಗಾನ ಕಲಾವಿದ ಉಪನ್ಯಾಸಕ ಗುಡ್ಡಪ್ಪ ಬಲ್ಯ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಗಾನದ ಸಂಘಟಕ ಪ್ರಾಯೋಜಕ ಅಮ್ಮಿ ಗೌಡ ನಾಲ್ಗೊತ್ತು ಸ್ವಾಗತಿಸಿ ಸನ್ಮಾನಿತರನ್ನು ಪರಿಚಯಿಸಿದರು. ಶ್ರೀ ವಿನಾಯಕ ಯಕ್ಷಗಾನ ಮಂಡಳಿ ಕಾರ್ಯದರ್ಶಿ ಕಿರಣ್ ಗೌಡ ಪುತ್ತಿಲ ನಿರೂಪಿಸಿದರು.
ಬಳಿಕ ನಡೆದ ಯಕ್ಷಗಾನ ವಾಕ್ ವೈಭವದಲ್ಲಿ ಜಯಪ್ರಕಾಶ್ ಶೆಟ್ಟಿ ಪೇರ್ಮುದೆ, ಗುಡ್ಡಪ್ಪ ಗೌಡ ಬಲ್ಯ, ತಿಮ್ಮಪ್ಪ ಗೌಡ, ಗಂಗಾಧರ ಶೆಟ್ಟಿ ಹೊಸಮನೆ. ಜಯರಾಮ ಗೌಡ ನಾಲ್ಗೊತ್ತು, ಕಿರಣ್ ಗೌಡ ಪುತ್ತಿಲ್ಲ, ಅಮ್ಮಿ ಗೌಡ ನಾಲ್ಗೊತ್ತು, ದಿವಾಕರ ಆಚಾರ್ಯ ಹಳೆನೇರಂಕಿ ಭಾಗವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀಮತಿ ಭವ್ಯಶ್ರೀ ಕುಲಕುಂದ, ಕುಸುಮಕರ ಆಚಾರ್ಯ ಹಳೆನೆರಂಕಿ,ಅಮ್ಮಿ ಗೌಡ ನಾಲ್ಗೊತ್ತು, ಮದ್ದಳೆಯಲ್ಲಿ ಮುರಳಿಧರ ಆಚಾರ್ಯ ಹಳೆನೆರಂಕಿ, ಸುಬ್ರಹ್ಮಣ್ಯ ಶಗ್ರಿತ್ತಾಯ, ಚೆಂಡೆಯಲ್ಲಿ ಸುಬ್ರಹ್ಮಣ್ಯ ಶಗ್ರಿತ್ತಾಯ, ಮಾಸ್ಟರ್ ಸುಜನ್ ಶಗ್ರಿತ್ತಾಯ ಭಾಗವಹಿಸಿದರು.