ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಲೀಜಿಯನ್ ಗೆ “ಎಕ್ಸಾಲೆನ್ಸ್ ಲೀಜಿಯನ್” ಅವಾರ್ಡ್

ಶೇರ್ ಮಾಡಿ

ನೆಲ್ಯಾಡಿ: ಕೇರಳದ ಕಣ್ಣೂರುನಲ್ಲಿ ನಡೆದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟೀಯ ಸಮ್ಮೇಳನದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜಿಯನ್ ಗೆ ರಾಷ್ಟೀಯ ಮಟ್ಟದ ಅತ್ಯುತ್ತಮ “ಎಕ್ಸಾಲೆನ್ಸ್ ಲೀಜಿಯನ್” ಅವಾರ್ಡ್ ಪಡೆದುಕೊಂಡಿದೆ.

2023-24ರ ಅವಧಿಯಲ್ಲಿ ನೆಲ್ಯಾಡಿ ಲೀಜಿಯನ್ ನಾರಾಯಣ N ಬಲ್ಯ ಕೊಲ್ಲಿಮಾರು ಇವರ ಅದ್ಯಕ್ಷತೆಯಲ್ಲಿ ಅತ್ಯುತ್ತಮ ಸಮಾಜ ಸೇವಾ ಚಟುವಟಿಕೆ, ತರಬೇತಿ, ಸಂಘಟನೆ, ಬಡ ವಿಕಲಚೇತನ ಹುಡುಗಿಗೆ ವೀಲ್ ಚೇರ್ ಕೊಡುಗೆ, ಬಡ ವಿಧವೆ ಮಹಿಳೆಗೆ ಸ್ವ ಉದ್ಯೋಗ ಮಾಡುವಲ್ಲಿ ಟೈಲರಿಂಗ್ ಮಷೀನ್ ಕೊಡುಗೆ, ದೇವಸ್ಥಾನಕ್ಕೆ ಶಾಶ್ವತ ಕಲ್ಲಿನ ಸ್ವಾಗತ ಬೋರ್ಡ್ ಕೊಡುಗೆ, ಸರಕಾರಿ ಶಾಲೆಗಳಿಗೆ ಲೈಬ್ರರಿಗೆ ಪುಸ್ತಕ ಕೊಡುಗೆ, ಬಟ್ಟಲು ಇಡುವ ಸ್ಟ್ಯಾಂಡ್ ಕೊಡುಗೆ, ನೀರಿನ ಟ್ಯಾಂಕ್ ಕೊಡುಗೆ, ಬಡ ರೋಗಿಯೊಬ್ಬರಿಗೆ ಅರ್ಥಕ ನೆರವು, ಪುತ್ತೂರುನಲ್ಲಿ ಹೊಸ ಲೀಜಿಯನ್ ಸ್ಥಾಪನೆ, ರಾಷ್ಟೀಯ ಹಾಗೂ ಪ್ರಾಂತೀಯ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ, ರಾಷ್ಟೀಯ ಹಬ್ಬಗಳ ಆಚರಣೆ, ಯೋಗ ದಿನಾಚರಣೆ, ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಸಂಘಟನೆಯನ್ನು ಗುರುತಿಸಿ ರಾಷ್ಟೀಯ ಸಮ್ಮೇಳನದಲ್ಲಿ ರಾಷ್ಟೀಯ ಅಧ್ಯಕ್ಷ ವರ್ಗಿಸ್ ವೈದ್ಯನ್ ರವರು ಅತ್ಯುತ್ತಮ ಲೀಜಿಯನ್ ಎಕ್ಷಲೆನ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟೀಯ ಉಪಾಧ್ಯಕ್ಷ ಹರಿಪ್ರಸಾದ್ ರೈ ಜಿ.ಕೆ., ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಮುದಾಯ ಅಭಿವೃದ್ಧಿ ವಿಭಾಗದ ರಾಷ್ಟೀಯ ಸಯೋಜಕ ಸದಾನಂದ ಕುಂದರ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜಿಯನ್ ಸೀನಿಯರೇಟ್ ಅಧ್ಯಕ್ಷರಾದ ಪುಷ್ಪಾ.ಕೆ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜಿಯನ್ ಉಪಾಧ್ಯಕ್ಷರಾದ ಉಲಹನ್ನನ್ ಪಿ.ಎಂ, ಪ್ರಕಾಶ್ ಕೆ.ವೈ ಮತ್ತು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟೀಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

error: Content is protected !!