ಮಾ.8: ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ರಂಗಪೂಜೆ, ದೈವಗಳ ನೇಮೋತ್ಸವ -ಶ್ರೀ ವಿಷ್ಣುಮೂರ್ತಿ ಮಹಾದ್ವಾರದ ಲೋಕಾರ್ಪಣೆ

ಶೇರ್ ಮಾಡಿ

ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಡುಬೆಟ್ಟು-ನೆಲ್ಯಾಡಿ ಇಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ರಂಗಪೂಜೆ, ದೈವಗಳ ನೇಮೋತ್ಸವ ಹಾಗೂ ಶ್ರೀ ವಿಷ್ಣುಮೂರ್ತಿ ಮಹಾದ್ವಾರದ ಲೋಕಾರ್ಪಣೆ ಮಾ.8ರಂದು ನಡೆಯಲಿದೆ ಎಂದು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ ಅವರು ತಿಳಿಸಿದ್ದಾರೆ.

ಮಾ.7ರಂದು ಸಂಜೆ 3.00 ಗಂಟೆಗೆ ಭಕ್ತಾದಿಗಳಿಂದ ಹೊರೆ ಕಾಣಿಕೆ ಸಮರ್ಪಣೆ ನಡೆಯಲಿದೆ. ಮಾ.8ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶ ಪೂಜೆ ನಡೆಯಲಿದೆ. ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ನಾಗದೇವರಿಗೆ ಮತ್ತು ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.00ಗಂಟೆಗೆ ಶ್ರೀ ದೇವರಿಗೆ ರಂಗಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅನಂತರ ದೈವಗಳ ನೇಮೋತ್ಸವ ನಡೆಯಲಿದೆ.
ಮಾ.8.00ರಂದು ಬೆಳಿಗ್ಗೆ 7.00ರಿಂದ ಸಂಜೆ 6.00ರ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಮಹಾದ್ವಾರ ಲೋಕಾರ್ಪಣೆ:
ಮಾ.8ರಂದು ಮಧ್ಯಾಹ್ನ 12 ಗಂಟೆಗೆ ಶ್ರೀ ವಿಷ್ಣುಮೂರ್ತಿ ಮಹಾದ್ವಾರದ ಲೋಕಾರ್ಪಣೆ ನಡೆಯಲಿದೆ. ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ. ಸೌತಡ್ಕ ನೈಮಿಷ ಡ್ರೈ ಫ್ರೂಟ್ಸ್ ಮತ್ತು ಸ್ಪೈಸಸ್ ನ ಬಾಲಕೃಷ್ಣ ನೈಮಿಷ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Leave a Reply

error: Content is protected !!