ಸಂತ್ರಸ್ತರಿಗೆ ಪರಿಹಾರ ನೀಡಲು ಬಿಜೆಪಿ ಯುವ ಮೋರ್ಚಾ ಆಗ್ರಹ

ಶೇರ್ ಮಾಡಿ

ಕಡಬ: ಕಡಬ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ವಿದ್ಯಾರ್ಥಿನಿಯರ ಮೇಲಿನ ಆ್ಯಸಿಡ್ ದಾಳಿಯನ್ನು ಖಂಡಿಸಿರುವ ಬಿಜೆಪಿ ಯುವ ಮೋರ್ಚಾ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ತಲಾ 10 ಲಕ್ಷ ರೂ.ಪರಿಹಾರ ಮತ್ತು ವಿದ್ಯಾರ್ಥಿನಿಯರ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಬೇಕೆಂದು ಆಗ್ರಹಿಸಿತು.

ಕಡಬ ತಾಲೂಕು ಆಡಳಿತ ಸೌಧಕ್ಕೆ ಮಂಗಳ ವಾರ ಭೇಟಿ ನೀಡಿದ ಬಿಜೆಪಿ ಯುವ ಮೋರ್ಚಾ ಪ್ರಮುಖರ ನಿಯೋಗವು ತಹಸೀಲ್ದಾರ್ ಕಚೇರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿತು. ಸುಳ್ಯ ಶಾಸಕಿ ಭಾಗೀರಥಿ

ಮುರುಳ್ಯ,ಯುವ ಮೋರ್ಚಾ ಸುಳ್ಯ ಮಂಡಲದ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಪೂರ್ವಾಧ್ಯಕ್ಷ ಶ್ರೀಕೃಷ್ಣ ಎಂ.ಆರ್., ಪ್ರಧಾನ ಕಾವ್ಯದರ್ಶಿ ಪ್ರದೀಪ್ ಕಲ್ಲರಮೂಲೆ, ಪ್ರಮುಖ ರಾದ ಹರ್ಷಿತ್ ಪೆರುವಾಜೆ, ಮನುದೇವ್ ಪರಮಲೆ, ದುರ್ಗೇಶ್ ಪಾರೆಪ್ಪಡಿ, ಬಿಜೆಪಿ ಪ್ರಮುಖರು, ಮತ್ತಿತರರು ಉಪಸ್ಥಿತರಿದ್ದರು. ಕಡಬ ಉಪ ತಹಸೀಲ್ದಾರ್ ಕೆ.ಟಿ. ಮನೋಹರ್ ಅವರು ಮನವಿ ಸ್ವೀಕರಿಸಿದರು. ಬಳಿಕ ಕಡಬ ಠಾಣೆಗೆ ತೆರಳಿದ ನಿಯೋಗವು ಆರೋಪಿಯ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿತು. ಕಡಬ ಎಸ್‌ಐ ಅಭಿನಂದನ್ ಎಂ.ಎಸ್. ಮನವಿ ಸ್ವೀಕರಿಸಿದರು.

Leave a Reply

error: Content is protected !!