ಉಪ್ಪಿನಂಗಡಿ: ಇಂದು ವಿದ್ಯಾರ್ಥಿಗಳಲ್ಲಿ ಪೋಕ್ಸೊ ಕಾಯಿದೆ ಮಾಹಿತಿ ಮತ್ತು ಮಾದಕ ವಸ್ತುಗಳ ಸೇವನೆಯ ಕುರಿತು ಜಾಗೃತಿ ಅಗತ್ಯ ಇದೆ- ಡಾ.ಗೋವಿಂದಪ್ರಸಾದ್ ಕಜೆ

ಶೇರ್ ಮಾಡಿ

ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಘಟಕದ ನೇತೃತ್ವದಲ್ಲಿ ಸರಕಾರಿ ಪ್ರೌಢ ಶಾಲೆ, ಬುಳೇರಿಮೊಗ್ರುನಲ್ಲಿ ವಿದ್ಯಾರ್ಥಿಗಳಲ್ಲಿ ಪೋಕ್ಸೊ ಕಾಯಿದೆಯ ಮಾಹಿತಿ ಮತ್ತು ಮಾದಕ ವಸ್ತುಗಳ ಸೇವನೆಯ ಬಗ್ಗೆ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಜೇಸಿಐ ವಲಯ ಹದಿನೈದರ ಪೂರ್ವ ವಲಯ ಉಪಾಧ್ಯಕ್ಷರು ಮತ್ತು ವಲಯ ತರಬೇತುದಾರರು ಡಾ|ಗೋವಿಂದಪ್ರಸಾದ್ ಕಜೆರವರು ಕಾರ್ಯಾಗಾರ ನಡೆಸಿಕೊಟ್ಟು, ಇಂದಿನ ವಿದ್ಯಾರ್ಥಿಗಳು ಪೋಕ್ಸೊ ಕಾಯಿದೆಯ ಮಾಹಿತಿ ಮತ್ತು ಮಾದಕವಸ್ತು ಸೇವನೆಯ ಕುರಿತು ವಿಶೇಷ ಜಾಗೃತಿ ಹೊಂದಿರಬೇಕು ಎಂದರು.

ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜೇಸಿ ಪ್ರಶಾಂತ್ ಕುಮಾರ್ ರೈ, ವಲಯ ತರಬೇತುದಾರ ಜೇಸಿ ಪ್ರದೀಪ್ ಬಾಕಿಲ, ಶಾಲಾ ಶಿಕ್ಷಕವೃಂದ, ಅಕ್ಷರದಾಸೋಹ ಸಿಬ್ಬಂದಿ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕರುಣಾಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೇಸಿಐ ಘಟಕದ ಅಧ್ಯಕ್ಷರಾದ ಜೇಸಿ ಲವೀನಾ ಪಿಂಟೊ ಸ್ವಾಗತಿಸಿದರು ಶಾಲಾ ಶಿಕ್ಷಕರಾದ ಧನಂಜಯ ಪಿ. ವಂದಿಸಿದರು. 10ನೇ ತರಗತಿಯ ವಿದ್ಯಾರ್ಥಿನಿ ನೌಶಿರ ತರಬೇತಿಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಅಕ್ಷರ ಸಿಬ್ಬಂದಿ ವಾರಿಜ ಎಂ ಮತ್ತು ಉಮಾ ಎನ್ ಇವರನ್ನು ಜೇಸಿ ವತಿಯಿಂದ ತಾವೂ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಮೌನ ಸಾಧಕ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.

Leave a Reply

error: Content is protected !!