ನಾವು ಮಾಡು ಸತ್ಕರ್ಮಗಳು ನಮ್ಮನ್ನು ಕಾಪಾಡುತ್ತದೆ- ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

ಶೇರ್ ಮಾಡಿ

ನೆಲ್ಯಾಡಿ: ನಾವು ಮಾಡುವ ಆಚಾರ ವಿಚಾರಗಳು ಹಾಗೂ ಸತ್ಕರ್ಮಗಳು ನಮ್ಮನ್ನು ಸದಾ ಕಾಯುತ್ತದೆ. ಕಾಲಕಾಲಕ್ಕೆ ಅಷ್ಟೋತ್ತರ, ಬ್ರಹ್ಮಕಲಶಾದಿಗಳು, ಪ್ರತಿಷ್ಠೆ, ಪ್ರತಿಷ್ಠ ವಾರ್ಷಿಕೋತ್ಸವಗಳು ನಡೆಯುತ್ತಿದ್ದರೆ ಅದು ನಾಡಿನ ಅಭಿವೃದ್ಧಿಯ ಸಂಕೇತವಾಗಿದೆ. ದೇವಸ್ಥಾನದ ಇರುವಿಕೆಯನ್ನು, ದೇವಸ್ಥಾನಕ್ಕೆ ಸ್ವಾಗತವನ್ನು ಕೋರಲು ದ್ವಾರಗಳ ಅವಶ್ಯಕತೆ ಇದೆ. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನಿಗೆ ಮಂದಿರ ನಿರ್ಮಾಣವಾದದ್ದು ಅತ್ಯಂತ ಸಂತೋಷಕರವಾದ ವಿಷಯವಾಗಿದೆ ಎಂದು ಸುಬ್ರಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ನೆಲ್ಯಾಡಿ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಾ.8ರಂದು ಪ್ರತಿಷ್ಠ ವಾರ್ಷಿಕೋತ್ಸವದ ದಿನದಂದು ನಡೆದ ದೇವಸ್ಥಾನದ ನೂತನ ದ್ವಾರ ಲೋಕಾರ್ಪಣೆ ನೆರವೇರಿಸಿ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ನೀಡಿದರು.

ವೇದಿಕೆಯಲ್ಲಿ ಗೌರವ ಉಪಸ್ಥಿತಿ ಸ್ಥಾನದಿಂದ ಸೌತಡ್ಕ ನೈಮಿಷ ಡ್ರೈಫ್ರುಟ್ಸ್ ಮತ್ತು ಸ್ಪೈಸಸ್ ಸಂಸ್ಥೆಯ ಮಾಲಕ ಬಾಲಕೃಷ್ಣ ನೈಮಿಷ ಮಾತನಾಡಿ ಸ್ವಧರ್ಮದವರೊಂದಿಗೆ ಅನ್ಯೂನತೆಯಿಂದ ವ್ಯವಹರಿಸುವುದರೊಂದಿಗೆ. ಪರಸ್ಪರ ಅಸೂಯೆ ಪಡೆದೆ ಒಗ್ಗಟ್ಟಿನಿಂದ ಸಮಾಜ ನಿರ್ಮಾಣ ಮಾಡಬೇಕು. ನಮಗೆ ದೇವರು ಕೊಟ್ಟ ಶಕ್ತಿಯನ್ನು ಒಳ್ಳೆಯ ಕೆಲಸ ಕಾರ್ಯಗಳಿಗೆ ಉಪಯೋಗಿಸಬೇಕು. ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ದುಡಿಮೆಯ ಒಂದಿಷ್ಟು ಪಾಲನ್ನು ನೀಡುವುದರ ಮೂಲಕ ಗ್ರಾಮಗಳಲ್ಲಿ ವಿದ್ಯಾವಂತರನ್ನು ಹೆಚ್ಚಿಸಲು ಸಹಾಯ ಮಾಡಬೇಕು. ಸಂಸ್ಕಾರಯುತ ಶಾಲೆಗಳಿಗೆ ನಮ್ಮ ಮಕ್ಕಳನ್ನು ಕಳಿಸುವುದರಿಂದ ಮಕ್ಕಳಲ್ಲಿ ಸಚ್ಚರಿತ್ರೆ ಬೆಳೆಸಲು ಸಾಧ್ಯ ಎಂದರು.

ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಸುಬ್ರಹ್ಮಣ್ಯ ಶಬರಾಯ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸತೀಶ್.ಕೆ.ಎಸ್ ಉಪಸ್ಥಿತರಿದ್ದರು.
ದ್ವಾರ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಜಯಾನಂದ ಬಂಟ್ರಿಯಲ್ ಅವರನ್ನು ಸ್ವಾಮೀಜಿಗಳು ಸನ್ಮಾನಿಸಿದರು.
ಸತೀಶ್. ಕೆ.ಎಸ್., ಪ್ರಸ್ತಾವಿಕವಾಗಿ ಮಾತನಾಡಿದರು. ಜಯಾನಂದ ಬಂಟ್ರಿಯಾಲ್ ಸ್ವಾಗತಿಸಿದರು. ರವೀಂದ್ರ.ಟಿ ನಿರೂಪಿಸಿದರು. ಶಿವಪ್ರಸಾದ್ ವಂದಿಸಿದರು.

ಮಾ.7ರಂದು ಸಂಜೆ 3.00 ಗಂಟೆಗೆ ಭಕ್ತಾದಿಗಳಿಂದ ಹೊರೆ ಕಾಣಿಕೆ ಸಮರ್ಪಣೆ. ಮಾ.8ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶ ಪೂಜೆ, ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ನಾಗದೇವರಿಗೆ ಮತ್ತು ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಸಂಜೆ 6.00ಗಂಟೆಗೆ ಶ್ರೀ ದೇವರಿಗೆ ರಂಗಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅನಂತರ ದೈವಗಳ ನೇಮೋತ್ಸವ ನಡೆಯಿತು.
ಮಾ.8.00ರಂದು ಬೆಳಿಗ್ಗೆ 7.00ರಿಂದ ಸಂಜೆ 6.00ರ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ನಡೆಯಿತು.

Leave a Reply

error: Content is protected !!