ಶಿರಾಡಿ: ಗ್ರಾಮಸಹಾಯಕ ಶೇಖರ ಗೌಡ ಹೃದಯಾಘಾತದಿಂದ ನಿಧನ

ಶೇರ್ ಮಾಡಿ

ಶಿರಾಡಿ ಗ್ರಾಮದ ಕಳಪ್ಪಾರು ನಿವಾಸಿ, ಶಿರಾಡಿ ಗ್ರಾಮ ಸಹಾಯಕ ಶೇಖರ ಗೌಡ(56ವ.)ರವರು ಮಾ.9ರಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸಂಜೆ 5 ಗಂಟೆ ವೇಳೆಗೆ ಮನೆಗೆಲ್ಲಿ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ಮನೆಯವರು ತಕ್ಷಣ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆತಂದರಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ.

ಶೇಖರ ಗೌಡ ಅವರು ಕಳೆದ 30ವರ್ಷಗಳಿಂದ ಶಿರಾಡಿ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ಪತ್ನಿ ಮೀನಾಕ್ಷಿ, ಪುತ್ರ ತೇಜಸ್, ಪುತ್ರಿಯರಾದ ತೇಜಸ್ವಿನಿ, ನಿಕ್ಷಿತಾ, ಇಬ್ಬರು ಸಹೋದರರು ಹಾಗೂ ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.

Leave a Reply

error: Content is protected !!