ಕಡಬ: ಬಸ್‌ನಲ್ಲಿ ಯವತಿಯ ಜತೆ ಅನುಚಿತ ವರ್ತನೆ

ಶೇರ್ ಮಾಡಿ

ಕಡಬ:ಉಪ್ಪಿನಂಗಡಿಯಿಂದ ಕಡಬ ಮೂಲಕ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಸರಕಾರಿ ಬಸ್‌ ನಿಗದಿತ ಸ್ಥಳದಲ್ಲಿ ನಿಲ್ಲಿಸದೆ ಯುವತಿಯ ಜತೆ ಅನುಚಿತ ವರ್ತನೆ ತೋರಿದ ಅರೋಪದಲ್ಲಿ ಬಸ್‌ ನಿರ್ವಾಹಕನನ್ನು ಕಡಬ ಪೊಲೀಸರು ವಶಕ್ಕೆ ಪಡೆದ ಘಟನೆ ಕಡಬದಲ್ಲಿ ಶನಿವಾರ ಸಂಭವಿಸಿದೆ.

ರಾಮಕುಂಜ ಸಮೀಪದ ಕುಂಡಾಜೆ ಎಂಬ ಪ್ರದೇಶದಿಂದ ಯುವತಿ ಬಸ್‌ ಏರಿದ್ದರು. ಆಲಂಕಾರಿಗೆ ಟಿಕೆಟ್‌ ಕೊಡಿ ಎಂದು ಯುವತಿ ಹೇಳಿದ್ದರೂ ನಿರ್ವಾಹಕ ಕಡಬಕ್ಕೆ ಟಿಕೆಟ್‌ ನೀಡಿ ಯುವತಿ ಹೇಳಿದ ಸ್ಥಳದಲ್ಲಿ ನಿಲ್ಲಿಸದೆ ಪ್ರಯಾಣ ಮುಂದು ವರಿಸಿದರು. ಯುವತಿ ತಾನು ಇಳಿಯುವ ಸ್ಥಳ ಬಂದಾಗ ಬಸ್‌ನಿಂದ ಇಳಿಯಲು ಬಾಗಿಲಿನತ್ತ ಹೊರಟಾಗ ನಿರ್ವಾಹಕ ಅನುಚಿತ ವರ್ತನೆ ತೋರಿ ಇಳಿಯದಂತೆ ತಡೆ ಹಾಕಿದ ಎಂದು ಎಂದು ಆರೋಪಿಸಲಾಗಿದೆ.

ಆ ಬಗ್ಗೆ ಯುವತಿ ಪರಿಚಿತರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಡಬ ಬಳಿಯ ಸಂಘಟನೆಯೊಂದರ ಸದಸ್ಯರು ಕಡಬ ಠಾಣೆಗೆ ಮಾಹಿತಿ ನೀಡಿದ್ದರು. ಯುವತಿ ನೀಡಿದ ದೂರಿನಂತೆ ಬಸ್‌ ನಿರ್ವಾಹಕನನ್ನು ಪೊಲೀಸ್‌ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿ ಕಳುಹಿಕೊಟ್ಟಿದ್ದಾರೆ. ಪ್ರಕರಣದ ಬಗ್ಗೆ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ದೂರು ನೀಡಲಾಗಿದೆ.

Leave a Reply

error: Content is protected !!