ನೆಲ್ಯಾಡಿ: ಮಹಿಳಾ ದಿನಾಚರಣೆ

ಶೇರ್ ಮಾಡಿ

ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘ ನಿ.ಇಲ್ಲಿ ಮಹಿಳಾ ದಿನಾಚರಣೆಯನ್ನು ಗ್ರಾಹಕರೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.

ದೀಪ ಬೆಳಗಿಸುವ ಮೂಲಕ ಸ್ವಉದ್ಯೋಗ ವನ್ನು ಯಶಸ್ವಿಯಾಗಿ ನಡೆಸುತ್ತಿರುವ ಸುನಿತಾ ಅವರು ಉದ್ಘಾಟಿಸಿದರು. ನೆಲ್ಯಾಡಿ ಸಾಂದ್ರ ಬ್ಯೂಟಿ ಪಾರ್ಲರ್ ಮಾಲಕಿ ವಿ.ಎ.ರೋಸಮ್ಮ ರವರು ಕೇಕ್ ಕತ್ತರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘ ನಿ. ಅಧ್ಯಕ್ಷೆ ಉಷಾ ಅಂಚನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು

ಸನ್ಮಾನ:
ಹಾಳೆ ತಟ್ಟೆ ಮತ್ತು ಹೋಟೆಲ್ ಉದ್ಯಮವನ್ನು ಮಾಡುತ್ತಾ, ಸ್ವಉದ್ಯೋಗದಲ್ಲಿ ಯಶಸ್ವಿಯಾಗಿರುವ ಹಳ್ಳಿಯ ಮಹಿಳೆಯರಿಗೆ ಮಾದರಿಯಾಗಿರುವ ಕಾಮಧೇನು ಮಹಿಳಾ ಸಹಕಾರ ಸಂಘದ ನಿರ್ದೇಶಕರಾಗಿರುವ ಶ್ರೀಮತಿ ಶಾಲಿನಿ ಶೇಖರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು ಹಾಗೂ ಮಹಿಳೆಯರ ಪಾಲಿನ ಆಪದ್ಬಾಂಧರಾಗಿರುವ ಎಲ್ಲಾ ಮಹಿಳೆಯರಿಗೂ ಮಾದರಿಯಾಗಿರುವಂತಹ ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾ ಅಂಚನ್ ಇವರಿಗೂ ಸಹಕಾರಿ ಸಂಘದ ಪರವಾಗಿ ಸನ್ಮಾನ ಮಾಡಲಾಯಿತು.

ದಿವ್ಯ.ಪಿ ಪ್ರಾರ್ಥಿಸಿದರು, ರತಿ ಸ್ವಾಗತಿಸಿದರು, ಶ್ವೇತ ಕುಮಾರಿ ನಿರೂಪಿಸಿದರು, ಕುಮಾರಿ ಶುಭಲಕ್ಷ್ಮಿ ವಂದಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಮೇಘನಾ ಶೈನ್ ಹಾಗೂ ನಿರ್ದೇಶಕರುಗಳು, ಸಿಬ್ಬಂದಿ ವರ್ಗದವರು ಮತ್ತು ಗ್ರಾಹಕರು ಹಾಜರಿದ್ದರು. ಬಳಿಕ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

Leave a Reply

error: Content is protected !!