ಉಪ್ಪಿನಂಗಡಿ: ಪಲ್ಸ್ ಪೊಲೀಯೊ ಲಸಿಕೆ ಕಾರ್ಯಕ್ರಮ

ಶೇರ್ ಮಾಡಿ

ಉಪ್ಪಿನಂಗಡಿ: ಪೋಲಿಯೋ ಮುಕ್ತ ಭಾರತದ ಆಶಯದಡಿಯಲ್ಲಿ ಪಲ್ಸ್ ಪೋಲಿಯೊ ಲಸಿಕೆ ನೀಡುವ ಕಾರ್ಯಕ್ರಮವನ್ನು ಸಮುದಾಯ ಆರೋಗ್ಯಕೇಂದ್ರ ಉಪ್ಪಿನಂಗಡಿ , ಜೇಸಿಐ ಉಪ್ಪಿನಂಗಡಿ ಘಟಕ, ರೋಟರಿ ಕ್ಲಬ್ ಉಪ್ಪಿನಂಗಡಿ ಮತ್ತು ಇತರ ಸಂಘಗಳ ಆಶ್ರಯದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಾಗೂ ಸ್ಥಳೀಯ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉಪ್ಪಿನಂಗಡಿ ಗ್ರಾ.ಪಂ.ಅಧ್ಯಕ್ಷರಾದ ಶ್ರೀಮತಿ ಲಲಿತ ಉದ್ಘಾಟಿಸಿದರು. ಜೇಸಿಐ ಅಧ್ಯಕ್ಷರಾದ ಜೇಸಿ ಲವೀನಾ ಪಿಂಟೊರವರು ಲಸಿಕೆ ಹಾಕಿಕೊಳ್ಳುವ ಮಹತ್ವದ ಬಗ್ಗೆ ತಿಳಿಸಿದರು. ಉಪ್ಪಿನಂಗಡಿ ಗ್ರಾ.ಪಂ.ಉಪಾಧ್ಯಕ್ಷರು ಶ್ರೀಮತಿ ವಿದ್ಯಾಲಕ್ಷ್ಮಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೃಷ್ಣಾನಂದ ಕೆ, ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಅನುರಾದ ಶೆಟ್ಟಿ, ಅಬ್ದುಲ್ ರಹೀಮ್ ಯುನಿಕ್, ಜೇಸಿಐ ಉಪ್ಪಿನಂಗಡಿ ಘಟಕದ ಪೂರ್ವಾಧ್ಯಕ್ಷ ಜೇಸಿ ರವೀಂದ್ರ ದರ್ಬೆ ,
ಜೇಸಿಐ ಕಾರ್ಯದರ್ಶಿ ಜೇಸಿ ಸುರೇಶ್, ಆಶಾ ಕಾರ್ಯಕರ್ತೆಯರು, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

error: Content is protected !!