ಕೊಕ್ಕಡ: ಚಿನ್ನಾಭರಣ ಪರೀಕ್ಷಕನ ವಜಾ ಪ್ರಕರಣದ ನಿಗೂಢತೆ ಬಯಲಿಗಾಗಿ ಮನವಿ

ಶೇರ್ ಮಾಡಿ

ಕೊಕ್ಕಡ: : ಇಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕೊಂದರ ಶಾಖೆಯಲ್ಲಿ ಚಿನ್ನಾಭರಣ ಪರೀಕ್ಷಕರನ್ನು ವಜಾ ಮಾಡಿರುವ ಪ್ರಕರಣದ ನಿಗೂಢತೆಯನ್ನು ಬಯಲು ಮಾಡಬೇಕೆಂದು ಹಾಗೂ ಪದ್ಮನಾಭ ಆಚಾರ್ಯರನ್ನು ಚಿನ್ನ ಪರಿಶೋಧಕನಾಗಿ ಮುಂದುವರಿಸುವಂತೆ ಅಗ್ರಹಿಸಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮಾ.18ರಂದು ಕೆನರಾ ಬ್ಯಾಂಕ್ ನ ಪುತ್ತೂರು ಹಿರಿಯ ಪ್ರಬಂಧಕ ಅರುಣ್ ಕುಮಾರ್ ಹಾಗೂ ಶಾಖಾ ಪ್ರಬಂಧಕ ಅಂಕಿತ್ ಸಿಂಗ್ ಮೂಲಕ ಮಂಗಳೂರು ಮುಖ್ಯ ಕಚೇರಿ ಜನರಲ್ ಮ್ಯಾನೇಜರ್ ಗೆ ಮನವಿ ಸಲ್ಲಿಸಲಾಯಿತು.

ಕೊಕ್ಕಡ ಗ್ರಾಮದ ಕೊಕ್ಕಡ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಳೆದ19 ವರ್ಷಗಳಿಂದ ಪದ್ಮನಾಭ ಆಚಾರ್ಯರವರು ಚಿನ್ನ ಪರಿಶೋಧಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ದುರುದ್ದೇಶದಿಂದ ಇವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಆದರೆ ಟರ್ಮಿನೇಶನ್ ಪತ್ರದಲ್ಲಿ ನಕಲಿ ಚಿನ್ನವನ್ನು ಬ್ಯಾಂಕಿನಲ್ಲಿ ಅಡಮಾನವಿಡಲು ಕಾರಣರಾಗಿದ್ದೀರಿ ಎಂಬ ಕಾರಣವನ್ನು ನೀಡಲಾಗಿದೆ. ಆದರೆ ಬ್ಯಾಂಕಿನ ಗೋಡೆಯಲ್ಲಿ ಅಂಟಿಸಲಾದ ಬರಹಗಳ ಪ್ರಕಾರ ವ್ಯವಸ್ಥಾಪಕರಿದ್ದು ನಿಯಮಗಳ ಪ್ರಕಾರ ಚಿನ್ನ ಪರಿಶೋಧಿಸಬೇಕು ಎಂಬ ಬರಹವನ್ನು ಬರೆಯಲಾಗಿದೆ ಮತ್ತು ಆಚಾರ್ಯರಿಗೆ ಇದುವರೆಗೆ ಚಿನ್ನವನ್ನು ವಿರೂಪಗೊಳಿಸಿ ಅಥವಾ ತುಂಡರಿಸಿ ಪರಿಶೀಲನೆ ನಡೆಸಬಹುದು ಎಂದು ನಿಯಮಗಳ ಮಾರ್ಗಸೂಚಿ ಪಟ್ಟಿಗಳನ್ನು ಕೊಟ್ಟಿರುವುದಿಲ್ಲ ಅಲ್ಲದೆ ನಕಲಿ ಚಿನ್ನವಾಗಿದ್ದಲ್ಲಿ ಸಾಲ ಪಡೆದ ವ್ಯಕ್ತಿಯ ಚಿನ್ನವನ್ನು ಯಾವ ಆಧಾರದಲ್ಲಿ ಹಿಂದುರುಗಿಸಲಾಗಿದೆ. ಯಾವ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವಂಚಕನ ಮೇಲೆ ಕೇಸು ತೆಗೆದುಕೊಳ್ಳಲಾಗಿದೆ. ದುರುದ್ದೇಶದಿಂದ ಬಲಿಪಶು ಮಾಡಲಾಗಿದೆ. ನಿರಪರಾಧಿಯಾಗಿರುವ ಪದ್ಮನಾಭ ಆಚಾರ್ಯರನ್ನು ಪುನಃ ಕೆಲಸದಲ್ಲಿ ಮುಂದುವರಿಸಬೇಕು ಹಾಗೂ ಮಾ.30ರ ಒಳಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಲಿಖಿತ ರೂಪದಲ್ಲಿ ತಿಳಿಸಬೇಕು. ನ್ಯಾಯಯುತ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ ಬ್ಯಾಂಕಿನ ಎದುರುಗಡೆ ಜೂನ್ 10ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಈ ಕುರಿತು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಸಾರ್ವಜನಿಕರು ಬ್ಯಾಂಕಿನ ಕೇಂದ್ರ ಕಛೇರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಬಿ.ಎಮ್ ಭಟ್, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಸುಬ್ರಹಣ್ಯ ಶಬರಾಯ, ಪದ್ಮನಾಭ ಆಚಾರ್ಯ, ಸಾಮಾಜಿಕ ಹೋರಾಟಗಾರ ಶ್ರೀಧರ ಕೆಂಗುಡೇಲು, ದಯಾನೀಶ್, ಕೊಕ್ಕಡ ಗ್ರಾಪಂ ಮಾಜಿ ಸದಸ್ಯ ಶೀನ ನಾಯ್ಕ, ಪಟ್ರಮೆ ಗ್ರಾಪಂ ಮಾಜಿ ಸದಸ್ಯ ಶ್ಯಾಮ್ ರಾಜ್, ಸಾಂತಪ್ಪ ಮಡಿವಾಳ, ಫಾರೂಕ್, ಉಮೇಶ್ ಸಪ್ತಗಿರಿ, ಬಾಲಕೃಷ್ಣ ಗೌಡ ಬಳಕ್ಕ, ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

error: Content is protected !!