ನೆಲ್ಯಾಡಿ ಜೇಸಿಐ ಘಟಕದಿಂದ ಮಹಿಳಾ ದಿನಾಚರಣೆ

ಶೇರ್ ಮಾಡಿ

ನೆಲ್ಯಾಡಿ ಜೇಸಿಐ, ಪ್ರಮುಖಿ ಮಹಿಳಾ ಮಂಡಲ ಹಾಗೂ ಸ್ತ್ರೀ ಶಕ್ತಿ ಗುಂಪುಗಳ ಸಹಯೋಗದೊಂದಿಗೆ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕೊಪ್ಪ ಮಾದೇರಿ ಆಶ್ರಮದ ಮುಖ್ಯಸ್ಥೆ ಸಿಸ್ಟರ್ ಸ್ಟ್ರೆಲ್ಲಾ ಮುಖ್ಯ ಅತಿಥಿಯಾಗಿ ಆಗಮಿಸಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದರು. ಅಧ್ಯಕ್ಷತೆಯನ್ನು ಜೇಸಿಐ ಅಧ್ಯಕ್ಷೆ ಸುಚಿತ್ರಾ. ಜೆ ಬಂಟ್ರಿಯಾಲ್ ವಹಿಸಿದ್ದರು. ವೇದಿಕೆಯಲ್ಲಿ ಸ್ತ್ರೀಶಕ್ತಿ ಗುಂಪಿನ ಅಧ್ಯಕ್ಷೆ ಜಯಂತಿ ಬಂಟ್ರಿಯಾಲ್, ಮಹಿಳಾ ಜೇಸಿಐ ಅಧ್ಯಕ್ಷೆ ಲೀಲಾ ಮೋಹನ್, ಕೋಶಾಧಿಕಾರಿ ಸುಪ್ರೀತ ರವಿಚಂದ್ರ, ಅಂಗನವಾಡಿ ಶಿಕ್ಷಕಿ ಸಂಪಾವತಿ ಉಪಸ್ಥಿತರಿದ್ದರು.

ಸನ್ಮಾನ :
40 ದಶಕಗಳಿಗಿಂತ ಹೆಚ್ಚು ಕಾಲ ನಾಟಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಕೊಪ್ಪದ ಹಿರಿಯ ನಾಟಿ ವೈದ್ಯೆ ಶ್ರೀಮತಿ ಲಿಂಗಮ್ಮ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿಯರು, ಸ್ತ್ರೀಶಕ್ತಿ ಗುಂಪಿನ ಮಹಿಳೆಯರು, ಪ್ರಮುಖಿ ಮಹಿಳಾ ಮಂಡಲದ ಸದಸ್ಯರು ಭಾಗವಹಿಸಿದ್ದರು.

Leave a Reply

error: Content is protected !!