ಕೋಲ್ಪೆ: ಗೂಡಂಗಡಿಯಿಂದ ಕಳ್ಳತನ

ಶೇರ್ ಮಾಡಿ

ನೆಲ್ಯಾಡಿ: ಕೊಣಾಲು ಗ್ರಾಮದ ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಮುಂಭಾಗ, ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ಗೂಡಂಗಡಿಯೊಂದರಿಂದ ಕಳ್ಳತನ ನಡೆದಿರುವ ಘಟನೆ ಮಾ.20ರಂದು ರಾತ್ರಿ ನಡೆದಿದೆ.

ಕೋಲ್ಪೆ ನಿವಾಸಿ ಮುಸ್ತಫಾ ಎಂಬವರ ಬದ್ರಿಯಾ ಸ್ಟೋರ್ ಗೂಡಂಗಡಿಯಲ್ಲಿ ಈ ಕಳ್ಳತನ ನಡೆದಿದೆ. ಮುಸ್ತಫಾ ಅವರು ಮಾ.20ರಂದು ರಾತ್ರಿ 9 ಗಂಟೆ ವೇಳೆಗೆ ಅಂಗಡಿ ಬಂದ್ ಮಾಡಿ ಮನೆಗೆ ಹೋಗಿದ್ದು ಮಾ.21ರಂದು ಮುಂಜಾನೆ 3 ಗಂಟೆ ವೇಳೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಅಂಗಡಿಯಲ್ಲಿದ್ದ 4 ಸಾವಿರ ನಗದು, ವಿಮಲ್, ಸ್ಟಾರ್, ಸಿಗರೇಟ್ ಸಹಿತ ಸುಮಾರು 15 ಸಾವಿರ ರೂ.ಮೌಲ್ಯದ ಸೊತ್ತು ಕಳವುಗೊಂಡಿರುವುದಾಗಿ ವರದಿಯಾಗಿದೆ.

ಕಳ್ಳತನದ ಬಗ್ಗೆ ಮುಸ್ತಫಾ ಅವರು ಪೊಲೀಸರಿಗೆ ದೂರು ನೀಡಿದ್ದು ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ

Leave a Reply

error: Content is protected !!