ಆನ್‌ಲೈನ್‌ ವಂಚನೆ: ಆರೋಪಿ ಬಂಧನ

ಶೇರ್ ಮಾಡಿ

ಅರೆಕಾಲಿಕ ಉದ್ಯೋಗ ಕೊಡಿಸುವ ಕುರಿತು ಆನ್‌ಲೈನ್‌ಕೊಂಡಿಯನ್ನು ವ್ಯಕ್ತಿಯೊಬ್ಬರಿಗೆ ಕಳುಹಿಸಿ, ಅವರಿಂದ ₹ 1.15 ಲಕ್ಷ ಪಡೆದು ವಂಚನೆ ಮಾಡಿದ್ದ ಪ್ರಕರಣದ ಆರೋಪಿಯನ್ನು ಇಲ್ಲಿನ ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ.

ರಾಜಸ್ಥಾನ ರಾಜ್ಯದ ಜೋಧಪುರ ಜಿಲ್ಲೆಯ ಬಾವುರಿ ಗ್ರಾಮದ ಸದ್ದಾಂ ಗೌರಿ ಅಲಿಯಾಸ್‌ ಬಾವುರಿ (30) ಬಂಧೀತ ಆರೋಪಿ.

ಆರೋಪಿಯು ಕೃತ್ಯಕ್ಕೆ ಬಳಸಿದ್ದ ಎರಡು ವಿವೊ ಮೊಬೈಲ್ ಫೋನ್‌ಗಳು, ಎಂಟು ಡೆಬಿಟ್ ಕಾರ್ಡ್‌ಗಳು, ಬ್ಯಾಂಕೊಂದರ ನಾಲ್ಕು ಚೆಕ್ ಪುಸ್ತಕಗಳು, ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದೇವೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಅರೆಕಾಲಿಕ ಉದ್ಯೋಗ ಕೊಡಿಸುವುದಾಗಿ ಅಪರಿಚಿತ ವ್ಯಕ್ತಿ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ್ದರು. ಇನ್ನೊಂದು ಕೊಂಡಿ ಕಳುಹಿಸಿದ್ದ ಆ ವ್ಯಕ್ತಿ, ಅದರಲ್ಲಿ ಹಣ ತೊಡಗಿಸಿದರೆ ದುಪ್ಪಟ್ಟು ಲಾಭ ಬರುತ್ತದೆ ಎಂದು ನಂಬಿಸಿ ₹1.15 ಲಕ್ಷ ಪಡೆದು ವಂಚನೆ ಮಾಡಿದ್ದಾನೆ ಎಂದು ವ್ಯಕ್ತಿಯೊಬ್ಬರು ಸೆನ್ ಠಾಣೆಗೆ ದೂರು ನೀಡಿದ್ದರು. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಠಾಣಾಧಿಕಾರಿ ಶ್ಯಾಮಸುಂದರ್ ನೇತೃತ್ವದ ತಂಡ ರಾಜಸ್ಥಾನಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

error: Content is protected !!