ಕೊಕ್ಕಡ ಇಲ್ಲಿಯ ಮಾಸ್ತಿಕಲ್ಲು ಮಜಲು ಶ್ರೀ ಪಿಲಿಚಾಮುಂಡಿ ಹಾಗೂ ಸಹ ಪರಿವಾರ ದೈವಗಳ ನೇಮೋತ್ಸವವು ಮಾ.25 ರಂದು ಜರುಗಿತು.
ಮಾ.24 ರಂದು ರಾತ್ರಿ ಶ್ರೀ ಗ್ರಾಮ ದೈವಗಳ ಭಂಡಾರ ತೆಗೆದು ನಂತರ ಮಾ.25ರಂದು ಬೆಳಿಗ್ಗೆ ನೇಮೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾಸ್ತಿಕಲ್ಲು ಮಜಲು ಇಲ್ಲಿ ವರ್ಷಂಪ್ರತಿ ನಡೆಯುವ ನೇಮೋತ್ಸವದಲ್ಲಿ ದೈವದ ಪಾತ್ರಿಯಾಗಿ ಸುಮಾರು 35 ವರ್ಷಗಳಿಂದ ಅತ್ಯಂತ ನಿಷ್ಠೆಯಿಂದ ಹಾಗೂ ಶ್ರದ್ಧಾ ಭಕ್ತಿಯಿಂದ ಸೇವೆಯನ್ನು ಮಾಡುತ್ತ ಬರುತ್ತಿದ್ದು ಇದೀಗ ತನ್ನ ವಯೋಸಹಜ ಕಾರಣದಿಂದ ದೈವದ ಪಾತ್ರಿ ಸೇವೆಯಿಂದ ನಿವೃತ್ತಿ ಹೊಂದಿದ್ದ ಪೂವಾಜೆ ರುಕ್ಮಯ್ಯ ಗೌಡ ಇವರನ್ನು ನೇಮೋತ್ಸವ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಾಲ್ವಿಕೆಯರಾದ ರಘುಚಂದ್ರ ತೋಡ್ತಿಲ್ಲಾಯ ಹಿರ್ತರಗುತ್ತು, ದೇವಿಪ್ರಸಾದ್ ಶಬರಾಯ ಅಡೈ ಜನನ, ರಾಮಯ್ಯ ಕೊಕ್ಕಡ ಪಟ್ಟೆ, ಮಹಾಬಲ ಮರಿಕೆ ಪರಾರಿ, ಆಡಳಿತ ಮೊಕ್ತೇಸರರು ಪುರುಷೋತ್ತಮ ಪೊಡಿಕೆತ್ತೂರು, ಗೌರವಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಅಧ್ಯಕ್ಷ ಕುಶಾಲಪ್ಪ ಗೌಡ ಪೊಡಿಕೆತ್ತೂರು, ಕಾರ್ಯದರ್ಶಿ ಹರೀಶ್ ಎಳ್ಳುಗದ್ದೆ ಹಾಗೂ ಶ್ರೀ ಪಿಲಿಚಾಮುಂಡಿ ಹಾಗೂ ಸಹಪರಿವಾರ ದೈವಗಳ ಸೇವಾ ಟ್ರಸ್ಟಿಗಳು ಹಾಗೂ ಊರ ಪರವೂರ ಭಕ್ತರು ಉಪಸ್ಥಿತರಿದ್ದರು.