ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕನಿಗೆ ಪಾಠ ಕಲಿಸಿದ ವಿದ್ಯಾರ್ಥಿಗಳು.!!

ಶೇರ್ ಮಾಡಿ

ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕಾದ ಶಿಕ್ಷಕನೇ ದಿನಾ ಶಾಲೆಗೆ ಕುಡಿದು ಬಂದು ಪಾಠ ಮಾಡದೇ ಕೊಠಡಿಯಲ್ಲಿ ಮಲಗುತ್ತಿರುವ ಶಿಕ್ಷಕನ ಕಾರ್ಯಕ್ಕೆ ರೊಚ್ಚಿಗೆದ್ದ ಅದೇ ಶಾಲೆಯ ವಿದ್ಯಾರ್ಥಿಗಳು ಕುಡುಕ ಶಿಕ್ಷಕನಿಗೆ ಸರಿಯಾದ ಪಾಠ ಕಳಿಸಿದ್ದಾರೆ.

ಛತ್ತೀಸ್‌ಗಢದ ಬಸ್ತಾರ್‌ನಲ್ಲಿರುವ ಶಾಲೆಯ ಶಿಕ್ಷರೊಬ್ಬರು ದಿನಾ ಕುಡಿದು ಶಾಲೆಗೆ ಬರುತ್ತಿದ್ದರು ಇದರಿಂದ ರೋಸಿಹೋದ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಎಲ್ಲರೂ ಜೊತೆಯಾಗಿ ಚಪ್ಪಲಿ, ಕಲ್ಲುಗಳಿಂದ ಹೊಡೆದು ಓಡಿಸಿದ್ದಾರೆ.

ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಶಿಕ್ಷಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಇದರ ಕೆಲವರು ಏನೇ ಆದರೂ ಶಿಕ್ಷಕರಿಗೆ ವಿದ್ಯಾರ್ಥಿಗಳ ಕೈಯಿಂದ ಹಾಗೆ ಮಾಡಬಾರದಿತ್ತು, ಶಿಕ್ಷಕರು ಯಾವತ್ತಿದ್ದರೂ ಶಿಕ್ಷಕರೇ ಹಾಗಾಗಿ ಮಕ್ಕಳ ಕೈಯಿಂದ ಈ ರೀತಿ ಚಪ್ಪಲಿ ಎಸೆದಿರುವುದು ತಪ್ಪು ಬದಲಾಗಿ ವಿದ್ಯಾರ್ಥಿಗಳ ಪೋಷಕರು ಬಂದು ಈ ವಿಚಾರದಲ್ಲಿ ಮಾತುಕತೆ ನಡೆಸಬಹುದಿತ್ತು ಅಲ್ಲದೆ ಶಿಕ್ಷಕನ ವಿರುದ್ಧ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬಹುದಿತ್ತು ಎಂದು ಹೇಳಿದ್ದಾರೆ.

ಏನೇ ಆದರೂ ಓರ್ವ ಶಿಕ್ಷಕ ಈ ರೀತಿ ಮಾಡಿರುವುದು ತಪ್ಪು ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ನೀಡಿ ಸರಿದಾರಿಗೆ ತರಬೇಕಾದ ಶಿಕ್ಷಕನೇ ಕುಡಿದು ಶಾಲೆಗೆ ಬಂದರೆ ವಿದ್ಯಾರ್ಥಿಗಳ ಪಾಡೇನು ಎಂಬಂತಾಗಿದೆ.

Leave a Reply

error: Content is protected !!