ಮಾ.31ರಂದು ನೆಲ್ಯಾಡಿ ಉಪ ಅಂಚೆಕಚೇರಿ ಅಂಚೆಪಾಲಕ ರಾಮಣ್ಣ ಶೆಟ್ಟಿ ನಿವೃತ್ತಿ

ಶೇರ್ ಮಾಡಿ

ನೆಲ್ಯಾಡಿ: ಅಂಚೆ ಇಲಾಖೆಯಲ್ಲಿ 41 ವರ್ಷ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ನೆಲ್ಯಾಡಿ ಉಪ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾಗಿರುವ ಡಿ.ರಾಮಣ್ಣ ಶೆಟ್ಟಿ ಅವರು ಮಾ.31ರಂದು ನಿವೃತ್ತಿಯಾಗಲಿದ್ದಾರೆ.

14-3-1983ರಲ್ಲಿ ಕೊಕ್ಕಡ ಅಂಚೆ ಕಚೇರಿಯಲ್ಲಿ ಇಲಾಖೇತರ ನೌಕರರಾಗಿ ಸೇವೆ ಆರಂಭಿಸಿದ ರಾಮಣ್ಣ ಶೆಟ್ಟಿಯವರು ಬಳಿಕ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 16-11-1991ರಂದು ಕಾರ್ಕಳ ಪ್ರಧಾನ ಅಂಚೆ ಕಚೇರಿಯಲ್ಲಿ ಅಂಚೆ ನೌಕರರಾಗಿ ಸೇವೆಗೆ ಸೇರ್ಪಡೆಗೊಂಡಿದ್ದರು. 26-4-1997ರಂದು ಗ್ರೂಫ್ ಸಿ ನೌಕರರಾಗಿ ಪದೋನ್ನತಿ ಹೊಂದಿ ನೆಲ್ಯಾಡಿ ಉಪ ಅಂಚೆ ಕಚೇರಿಗೆ ವರ್ಗಾವಣೆಗೊಂಡು ಆಗಮಿಸಿದ್ದರು. ಬಳಿಕ ಗುತ್ತಿಗಾರು, ಕೊಕ್ಕಡ, ನೆಲ್ಯಾಡಿ, ಕಡಬ, ಎಸ್‌ಡಿಎಂಸಿ ಉಜಿರೆ, ಕೊಕ್ಕಡ, ಮಾಣಿ, ಪುತ್ತೂರು ಪ್ರಧಾನ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿ 2020ರಲ್ಲಿ ಮತ್ತೆ ನೆಲ್ಯಾಡಿ ಉಪಅಂಚೆ ಕಚೇರಿಗೆ ಆಗಮಿಸಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಡಿ.ರಾಮಣ್ಣ ಶೆಟ್ಟಿ ಅವರು ಪತ್ನಿ ನಳಿನಿ ಆರ್.ಶೆಟ್ಟಿ, ಪುತ್ರರಾದ ವೋಕ್ಸ್‌ವಾಗನ್ ಕಂಪನಿಯ ಮಂಗಳೂರು ಕಚೇರಿ ವ್ಯವಸ್ಥಾಪಕ ಪ್ರಜ್ವಲ್ ಶೆಟ್ಟಿ, ಕೆನಡಾದಲ್ಲಿ ಉದ್ಯೋಗಿಯಾಗಿರುವ ಉಜ್ವಲ್ ಶೆಟ್ಟಿ ಹಾಗೂ ಸೊಸೆ ಭವಿಷ್ಯಪ್ರಜ್ವಲ್ ಶೆಟ್ಟಿಯವರೊಂದಿಗೆ ಕೌಕ್ರಾಡಿ ದೋಂತಿಲ ಮಾತೃಕೃಪಾದಲ್ಲಿ ವಾಸ್ತವ್ಯವಿದ್ದಾರೆ.

Leave a Reply

error: Content is protected !!