ಟೂರಿಸ್ಟ್ ಟೆಂಪೋ ಹಾಗು ಸಿಎನ್ ಜಿ ಸಾಗಾಟದ ವಾಹನದ ನಡುವೆ ಅಪಘಾತ; ಇಬ್ಬರಿಗೆ ಗಂಭೀರ ಗಾಯ

ಶೇರ್ ಮಾಡಿ

ಆಲಂಕಾರು. ಆಲಂಕಾರು- ಶಾಂತಿಮೊಗರು ರಸ್ತೆಯ ಕಯ್ಯಾಪ್ಪೆ ಎಂಬಲ್ಲಿ ಟೂರಿಸ್ಟ್ ಟೆಂಪೋ ಹಾಗು ಸಿಎನ್ ಜಿ ಸಾಗಾಟದ ವಾಹನದ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಅಪಘಾತದಲ್ಲಿ ಕೆಪುಳು ನಿವಾಸಿ ದಿನೇಶ ಹಾಗೂ ಕಾಣಿಯೂರು ನಿವಾಸಿ ಸುನೀಲ್ ಅವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳು ದಿನೇಶ್ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸುನೀಲ್ ಎಂಬವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ.

ಘಟನೆಯಿಂದ ಆಲಂಕಾರು – ಶಾಂತಿಮೊಗರು ರಸ್ತೆಯು ಎರಡು ಗಂಟೆ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಪುತ್ತೂರು ಅಗ್ನಿಶಾಮಕ ದಳ ಮತ್ತು ಕಡಬ ಪೊಲೀಸರು ಸ್ಥಳಕ್ಕೆ ಆಗಮಿಸಿ ರಸ್ತೆ ತೆರವುಗೊಳಿಸಿ ಸಂಚಾರ ಮುಕ್ತಗೊಳಿಸಿದರು.

Leave a Reply

error: Content is protected !!