ವಿಷವಿಕ್ಕಿದ ದುರುಳರು; 10 ಕ್ಕೂ ಅಧಿಕ ಬೀದಿ ನಾಯಿಗಳ ಸಾವು

ಶೇರ್ ಮಾಡಿ

ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ- ಹುರ್ತಾಜೆ ರಸ್ತೆಯಲ್ಲಿ ಯಾರೋ ದುರುಳರು ವಿಷವಿಕ್ಕಿದ ಪರಿಣಾಮ 10ಕ್ಕಿಂತ ಅಧಿಕ ಸಾಕು ನಾಯಿ ಹಾಗೂ ಬೀದಿ ನಾಯಿಗಳು ಸಾವನ್ನಪ್ಪಿವೆ.

ಮಾ.30ರ ಶನಿವಾರ ರಾತ್ರಿ ಈ ರಸ್ತೆಯುದ್ದಕ್ಕೂ ಆಹಾರದಲ್ಲಿ ವಿಷ ಬೆರೆಸಿ ಅಲ್ಲಲ್ಲಿ ಎಸೆದು ಹೋಗಿದ್ದಾರೆ. ಇದನ್ನು ತಿಂದಿರುವ ನಾಯಿಗಳು ಸತ್ತು ಬಿದ್ದಿವೆ. ತಡರಾತ್ರಿ ಈಸ್ಟರ್ ಹಬ್ಬದಿಂದ ತೆರಳುತ್ತಿದ್ದ ಮಂದಿ ಇದನ್ನು ಗಮನಿಸಿ ತಕ್ಷಣ ಪಂಚಾಯಿತಿ ಅಧ್ಯಕ್ಷ ಗಣೇಶ್ ಬಂಗೇರ ಅವರ ಗಮನಕ್ಕೆ ತಂದರು. ಪರಿಶೀಲನೆ ನಡೆಸಿದಾಗ ಕೆಲವು ಮನೆಗಳ ಅಂಗಳದಲ್ಲೂ ನಾಯಿಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ.

ಸಾವನ್ನಪ್ಪಿದ ನಾಯಿಗಳನ್ನು ಪಂಚಾಯಿತಿ ವತಿಯಿಂದ ದಫನ ಮಾಡಲಾಯಿತು. ಎರಡು ವರ್ಷಗಳ ಹಿಂದೆ ಇದೇ ರೀತಿ ಘಟನೆ ಈ ಪರಿಸರದಲ್ಲಿ ನಡೆದಿತ್ತು ಎನ್ನಲಾಗಿದೆ.

Leave a Reply

error: Content is protected !!