ಶ್ರೀರಾಮ ದರ್ಶನ ತಾಳಮದ್ದಳೆ

ಶೇರ್ ಮಾಡಿ

ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯ ಪ್ರಯುಕ್ತ ಯಕ್ಷ ಭಾರತಿ ಕನ್ಯಾಡಿ ವತಿಯಿಂದ ಶ್ರೀರಾಮ ದರ್ಶನ ತಾಳಮದ್ದಳೆ ಜರಗಿತು.

ಭಾಗವತರಾಗಿ ನಾರಾಯಣ ಶಬರಾಯ ಮಹೇಶ ಕನ್ಯಾಡಿ, ಹಿಮ್ಮೇಳದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಶ್ರೇಯಸ್ ಪಾಳಂದೆ

ಅರ್ಥಧಾರಿಗಳಾಗಿ ಗೋಪಾಲ ಶೆಟ್ಟಿ ಕಳೆಂ (ಬಲರಾಮ) ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ಕೃಷ್ಣ )ಹರಿದಾಸ ಗಾಂಭೀರ ಧರ್ಮಸ್ಥಳ (ಜಾಂಬವಂತ) ಭಾಗವಹಿಸಿದ್ದರು.
ದೇವಳದ ಪರವಾಗಿ ಪಿ.ಸುರೇಶ ಪುತ್ತೂರಾಯ, ಪ್ರಶಾಂತ ಎಣ್ಮಾಡಿ ಕಲಾವಿದರನ್ನು ಗೌರವಿಸಿದರು. ರಾಘವೇಂದ್ರ ಬೈಪಾಡಿತ್ತಾಯ ಅಧ್ಯಕ್ಷರು ತುಳು ಶಿವಳ್ಳಿ ಸಭಾ ಬೆಳ್ತಂಗಡಿ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು. ಸುಂದರ ಶೆಟ್ಟಿ ಎಂಜಿರಪಲಿಕೆ ಸ್ವಾಗತಿಸಿ ವಂದಿಸಿದರು.

Leave a Reply

error: Content is protected !!