ಕಪಿಲಾ ನದಿಯಲ್ಲಿ ನಿಂತ ನೀರಿನ ಹರಿವು: ದೇವರ ಮೀನುಗಳಿಗೆ ತೊಂದರೆಯ ಆತಂಕ

ಶೇರ್ ಮಾಡಿ

ಶಿಶಿಲ ದೇವಸ್ಥಾನದಲ್ಲಿ ದೇವರ ಮೀನುಗಳಿಗೆ ಕಪಿಲಾ ನದಿಯಲ್ಲಿ ನೀರಿನ ಒಳ ಹರಿವು ಕಡಿಮೆ ಆಗಿರುವುದರಿಂದ ದಿನ ನಿತ್ಯ ಊರ ಪರವೂರ ಭಕ್ತಾದಿಗಳು ಆಗಮಿಸುತ್ತಾರೆ. ಶಿಶಿಲ ದೇವಾಲಯದಲ್ಲಿ ಸ್ವಾಮಿಯ ದರ್ಶನದಂತೆ ಮೀನುಗಳಿಗೂ ಹರಕೆ ಇಲ್ಲಿ ವಿಶೇಷ.
ಇತ್ತೀಚೆಗೆ ಇಲ್ಲಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ನಿತ್ಯ ಹರಿವು ನಿಂತಿದೆ. ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ನದಿಯ ಮೀನುಗಳಿಗೆ ಅತಿಯಾದ ಆಹಾರ ಹಾಕುವುದರಿಂದ ನೀರು ಕಲುಷಿತವಾಗಿ ದೇವರ ಮೀನುಗಳಿಗೆ ತೊಂದರೆ ಆಗಿದೆ. ಇದನ್ನು ಅರಿತ ದೇವಾಲಯದ ಆಡಳಿತ, ಮೀನುಗಳಿಗೆ ಭಕ್ತರು ಅರಳು ಹಾಕುವುದನ್ನು ನಿಷೇಧ ಮಾಡಿದೆ.

ರಾಸಾಯನಿಕಯುಕ್ತ ಅರಳು
ಇತ್ತೀಚಿನ ದಿನಗಳಲ್ಲಿ ಎಲ್ಲೂ ಕಂಡುಬರುವ ರಾಸಾಯನಿಕಯುಕ್ತ ವಸ್ತುಗಳಲ್ಲಿ ಅರಳೂ ಸೇರಿಕೊಂಡಿದೆ. ಆರಳಿಗೂ ರಾಸಾಯನಿಕ ವಸ್ತು ಇದೆ ಎಂಬ ಸಂಶಯ ಮೂಡಲಾರಂಬಿಸಿದೆ. ಮೀನುಗಳ ಆಹಾರದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲ ಮತ್ತು ನೀರೂ ಕಲುಷಿತ ಮಾಡಬಲ್ಲ ಅರಳನ್ನು ನಿಷೇಧ ಮಾಡಲಾಗಿದೆ. ಹಿಂದಿನ ಪರಂಪರೆಯಂತೆ ಬಿಳಿ ಅಕ್ಕಿಯನ್ನು ಅಗತ್ಯ ಕಂಡು ಬಂದಲ್ಲಿ ಅಲ್ಪಪ್ರಮಾಣದಲ್ಲಿ ಹಾಕಬಹುದು ಮತ್ತು ಇತರ ಯಾವುದೇ ತಿಂಡಿಯನ್ನು ಹಾಕಬಾರದು.

ಈ ಕುರಿತು ಎಲ್ಲಾ ಊರಿನ ಪರ ಊರಿನ ಭಕ್ತಾದಿಗಳು ಸಹಕರಿಸುವಂತೆ ದೇವಾಲಯದ ಆಡಳಿತಾಧಿಕಾರಿಗಳು ಮತ್ತು ಮತ್ಸ್ಯ ಹಿತರಕ್ಷಣಾ ವೇದಿಕೆ ವಿನಂತಿ ಮಾಡಿದೆ.

Leave a Reply

error: Content is protected !!