ಮಗು ಇರುವ ಸ್ಥಳ ತಲುಪಿದ ರಕ್ಷಣಾ ತಂಡ ಅಳುವ ಧ್ವನಿ ಆಲಿಕೆ

ಶೇರ್ ಮಾಡಿ

ಕೊಳವೆ ಬಾವಿಗೆ ಬಿದ್ದಿರುವ ಸಾತ್ವಿಕ್ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ತಂಡ ಮಗು ಇರುವ ಸ್ಥಳವನ್ನು ತಲುಪಿದೆ. ಸಾತ್ವಿಕ ಅಳುವ ಧ್ವನಿ ಕೇಳಿಸುತ್ತಿದ್ದು ರಕ್ಷಣಾ ತಂಡ ಆಶಾದಾಯಕ ಫಲಿತಾಂಶಕ್ಕೆ ಹತ್ತಿರವಾಗಿದೆ.

ಎನ್.ಡಿ.ಆರ್.ಎಫ್. ತಂಡ ಸುರಂಗ ಕೊರೆದು ಮಗು ಸಿಲುಕಿರುವ ಸ್ಥಳ ತಲುಪಿದ್ದು, ಕ್ಷೀಣ ಧ್ವನಿಯಲ್ಲಿ ಸಾತ್ವಿಕ ಅಳುವ ಧ್ವನಿ ಕೇಳಿಸಿದ್ದು, ರಕ್ಷಣಾ ತಂಡ ಸಂತಸದಲ್ಲಿದೆ.

22 ಅಡಿ ಆಳದಲ್ಲಿ ಕೊಳವೆ ಬಾವಿ ರಂದ್ರ ಪತ್ತೆಯಾಗಿದ್ದು, ಮಗು ಕೆಳಗೆ ಕುಸಿಯದಂತೆ ತಡೆಯನ್ನು ಹಾಕಲಾಗಿದೆ.

ಇದೀಗ ರಕ್ಷಣಾ ತಂಡ ಮಗುವಿನ ದೇಹವನ್ನು ಕೊಳವೆ ಬಾವಿಯ ಮಣ್ಣಿನಿಂದ ಬಿಡಿಸುವ ಕಾರ್ಯದಲ್ಲಿ ತೊಡಗಿದೆ.

Leave a Reply

error: Content is protected !!