
ಪವಿತ್ರ ರಮಝಾನ್‌ನ 29 ವೃತಗಳನ್ನು ಅನುಷ್ಠಾನಗೊಳಿಸಿದ ಮುಸ್ಲಿಮರು ಇಂದು ಅತ್ಯಂತ ಸಡಗರ, ಸಂಭ್ರಮದಿಂದ ‘ಈದುಲ್ ಫಿತ್ರ್’ ಆಚರಿಸಿದರು.
ನೆಲ್ಯಾಡಿ, ಹೊಸಮಜಲು, ಕೊಣಾಲು, ಕೊಕ್ಕಡ, ಮಲ್ಲಿಗೆಮಜಲು, ಬೋಳದಬೈಲು ಮಸೀದಿಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿಯ ಮೂಲಕ ಹಬ್ಬಕ್ಕೆ ಸಂಭ್ರಮ ತಂದರು. ಹಾಗೇ ಕುಟುಂಬಸ್ಥರು, ಸ್ನೇಹಿತರು, ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯ ಕೋರಿದರು.

ಎಲ್ಲಾ ಮಸೀದಿಗಳಲ್ಲಿ ವಿಶೇಷ ನಮಾಝ್, ಪ್ರವಚನ ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ವಿನಿಮಯ ಹಾಗೂ ಮನೆಗಳಲ್ಲಿ ಹಬ್ಬದ ಸಂಭ್ರಮ ಕಂಡು ಬಂತು.ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಉಪವಾಸಿಗರು ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ, ವಿಶಿಷ್ಟ ಬಗೆಯ ತಿಂಡಿ-ತಿನಿಸು ತಿಂದು ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಸಂಭ್ರಮಿಸಿದರು.
ಬಹು ಶೌಕಾತಾಲಿ ಅಮಾನಿ ಖತೀಬರು ದಾರ್ಮಿಕ ನೇತೃತ್ವವನ್ನು ವಹಿಸಿದರು. ಈ ಸಂದರ್ಭದಲ್ಲಿ ನೆಲ್ಯಾಡಿ ಬದ್ರಿಯಾ ಜುಮ್ಮ ಮಸ್ಜೀದ್ ಅಧ್ಯಕ್ಷ ಹನೀಫ್ ಸಿಟಿ, ಎನ್.ಎಸ್ ಸುಲೈಮನ್, ರಫೀಕ್ ಬೈಲು. ಇಲ್ಯಾಸ್.ಎಸ್, ಉಮ್ಮರ್ ತಾಜ್, ಇಸ್ಮಾಯಿಲ್ ನೆಲ್ಯಾಡಿ ವಕೀಲರು ಮತ್ತು ನೋಟರಿ, ರಫೀಕ್ ಅಲಂಪಾಡಿ, ನಾಜೀಂ ಸಾಹೇಬ್, ನೆಲ್ಯಾಡಿ ಗ್ರಾ. ಪಂ. ಸದಸ್ಯರಾದ ಅಬ್ದುಲ್ ಜಬ್ಬಾರ್, ಮಹಮ್ಮದ್ ಇಕ್ಬಾಲ್ ಕೊಕ್ಕಡ-ಮಲ್ಲಿಗೆಮಜಲು ಪಝಲ್ ಜಿಮ್ಮಾ ಮಸೀದಿಯಲ್ಲಿ ಆಶೀಫ್ ಫೈಝಿ ಪಾಡವರಕಲ್ಲು ಖತೀಬರು ಧಾರ್ಮಿಕ ನೇತ್ವತ್ವವನ್ನು ವಹಿಸಿದರು, ಆಡಳಿತ ಕಮಿಟಿಯ ಅಧ್ಯಕ್ಷರು ಉಮ್ಮರ್ ಬೈಲಂಗಡಿ ಮೊದಲಾದವರು ಉಪಸ್ಥಿತರಿದ್ದರು.



