ಉಪ್ಪಿನಂಗಡಿ: ಜೇಸಿಐ ವತಿಯಿಂದ ಮೌನ ಸಾಧಕರಿಗೆ ಸನ್ಮಾನ

ಶೇರ್ ಮಾಡಿ

ಉಪ್ಪಿನಂಗಡಿ: ಉಪ್ಪಿನಂಗಡಿ ಜೇಸಿಐ ಘಟಕ ನೇತೃತ್ವದಲ್ಲಿ ಉಪ್ಪಿನಂಗಡಿ ಕಾನ್ವೆಂಟ್ ನಲ್ಲಿಯ ನಿವೃತ್ತ ಕ್ರೈಸ್ತ ಭಗಿನಿಯರಾದ ಸಿ|ಸೆಲೆಸ್ಟ್ರಿನಾ ಲೋಬೊ, ಸಿ|ಗ್ರೇಸಿ ಡಿ’ಸೋಜಾ ಅವರ ನಿಸ್ವಾರ್ಥ ಸೇವೆಗಾಗಿ ಗ್ರೆಗರಿ ಲೋಬೊ ಇವರ ಗೃಹದಲ್ಲಿ ಕ್ರೈಸ್ತಬಾಂಧವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ್ಪಿನಂಗಡಿ ಜೇಸಿಐ ಘಟಕದ ಅಧ್ಯಕ್ಷರಾದ ಜೇಸಿ ಲವೀನಾ ಪಿಂಟೊ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಜೇಸಿ ಸುರೇಶ್, ವಲಯಾಧಿಕಾರಿ ಜೇಸಿ ಶೇಖರ್ ಗೌಂಡತ್ತಿಗೆ, ಓಸ್ವಲ್ಡ್ ಪಿಂಟೊ, ಜೋಸ್, ವಿನ್ಸೆಂಟ್ ಫೆರ್ನಾಂಡಿಸ್, ಗ್ರೆಗರಿ ಲೋಬೊ, ಜೇನ್ ಲೋಬೊ, ಶಿಲ್ಪಾ ಮಿನೇಜಸ್, ಸ್ವಪ್ನಾ ಮಿನೇಜಸ್, ಪ್ಲೋರಾ, ಲಿಲ್ಲಿ ಗೊನ್ಸಾಲ್ವಿಸ್, ವಿಜಿ ನೊರೊನ್ಹಾ, ಸವಿತಾ ಮಸ್ಕರೇನ್ಹಸ್, ಫ್ಲೋಸಿ ಮಿನೇಜಸ್, ರೊನಿ ಪೆರಿಯಡ್ಕ, ಜಿ.ಎ.ಮಿನೇಜಸ್, ನಮಿತಾ ಲೋಬೊ ಉಪಸ್ಥಿತರಿದ್ದರು.

ಉಪನ್ಯಾಸಕ ಜೇಸಿ ಮೋಹನ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು. ಜೇಸಿಐ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜೇಸಿ ಪ್ರಶಾಂತ್ ರೈ ಧನ್ಯವಾದ ಅರ್ಪಿಸಿದರು. ಗ್ರೆಗರಿ ಲೋಬೊ ಉಪಹಾರ ನೀಡಿ ಸಹಕರಿಸಿದರು.

Leave a Reply

error: Content is protected !!