ನಮ್ಮ ನಡೆ ಮತಗಟ್ಟೆ ಕಡೆ; ಜಾಗೃತಿ ಅಭಿಯಾನ ಹಾಗೂ ಧ್ವಜಾರೋಹಣ ಕಾರ್ಯಕ್ರಮ

ಶೇರ್ ಮಾಡಿ

ಕೊಕ್ಕಡ: ಮತದಾರರಿಗೆ ಮತಗಟ್ಟೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ‘ನಮ್ಮ ನಡೆ ಮತಗಟ್ಟೆ ಕಡೆʼ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗಬೇಕೆಂಬ ಆಶಯ ಹೊಂದಿದೆ. ಎಲ್ಲ ಮತಗಟ್ಟೆಗಳಲ್ಲಿಯೂ ಈ ಕಾರ್ಯಕ್ರಮ ನಡೆದಿದೆ ಎಂದು ಕೊಕ್ಕಡ ಗ್ರಾಮ ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ಹೇಳಿದರು.

ಅವರು ಏ.21 ಕೊಕ್ಕಡ ಪ್ರಾಥಮಿಕ ಶಾಲೆಯ ಚುನಾವಣಾ ಬೂತ್ ನಲ್ಲಿ ‘ನಮ್ಮ ನಡೆ ಮತಗಟ್ಟೆ ಕಡೆ’ ಜಾಗೃತಿ ಅಭಿಯಾನ, ಧ್ವಜಾರೋಹಣ ಹಾಗೂ ಮತಗಟ್ಟೆ ಸುತ್ತ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಸಂದರ್ಭ ಸ್ತ್ರೀ ಶಕ್ತಿ ಸಂಘದ ತಾಲೂಕು ಸಂಯೋಜಕಿ ವೀಣಾ, ಕೊಕ್ಕಡ ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯರು, ಮತದಾನ ಜಾಗೃತಿ ಸಮಿತಿಯವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

error: Content is protected !!