ಹೃದಯಾಘಾತಕ್ಕೆ ಬಲಿಯಾದ ಯುವಕ ಜಿತೇಶ್

ಶೇರ್ ಮಾಡಿ

ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ವಿವಾಹಿತ ಯುವಕನೊರ್ವ ಮಲಗಿದ್ದಲೇ ಹೃದಯಾಘಾತದಿಂದ ಸಾವನಪ್ಪಿದ ಘಟನೆ ಉಳ್ಳಾಲ ಕೊಲ್ಯ ಕನೀರುತೋಟದಲ್ಲಿ ಮಂಗಳವಾರ ಸಂಭವಿಸಿದೆ. ಮೃತರನ್ನು ಕನೀರುತೋಟ ನಿವಾಸಿ ಜಿತೇಶ್ (28) ಎಂದು ಗುರುತಿಸಲಾಗಿದೆ.

ಜಿತೇಶ್ ಅವರು ನಿನ್ನೆ ರಾತ್ರಿ ಊಟ ಮುಗಿಸಿ ಮಲಗಿದ್ದವರು ಇಂದು ಬೆಳಿಗ್ಗೆ ಏಳದ ಕಾರಣ, ಮನೆಮಂದಿ ಪರೀಕ್ಷಿಸಿದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಜಿತೇಶ್ ಮಂಗಳೂರಿನ ಕೆಟಿಎಂ ಷೋರೂಂ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು, ಮೃತರು ತಂದೆ, ತಾಯಿ, ಪತ್ನಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Leave a Reply

error: Content is protected !!