ನೆಲ್ಯಾಡಿ ವಿ.ವಿ ಘಟಕ ಕಾಲೇಜುನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ

ಶೇರ್ ಮಾಡಿ

ನೆಲ್ಯಾಡಿ ವಿ.ವಿ ಘಟಕ ಕಾಲೇಜು ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ನೇಮಕವು ಬುಧವಾರ ದಂದು ನಡೆಯಿತು.

ಕಾಲೇಜಿನ ಸಂಯೋಜಕ ಡಾ.ಸುರೇಶ್ ಅವರು ಅಧ್ಯಕ್ಷತೆಯನ್ನು ವಹಿಸಿ ಶಿಕ್ಷಕ ರಕ್ಷಕ ಸಂಘದ ಪಾತ್ರದ ಮಹತ್ವವನ್ನು, ಕಾಲೇಜಿನ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡುವುದರೊಂದಿಗೆ ಶೈಕ್ಷಣಿಕ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.

ನೂತನವಾಗಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಉದಯ, ಉಪಾಧ್ಯಕ್ಷರಾಗಿ ಪ್ರೇಮ, ಸಹ ಕಾರ್ಯದರ್ಶಿಯಾಗಿ ಸೇಸಮ್ಮ, ಸದಸ್ಯರಾಗಿ ಶಿವಣ್ಣ, ಪಾರ್ವತಿ, ನಾಗೇಶ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆಯ್ಕೆ ಪ್ರಕ್ರಿಯೆಯನ್ನು ಡಾ.ನೂರಂದಪ್ಪ ನಡೆಸಿಕೊಟ್ಟರು.

ಶಿಕ್ಷಕ-ರಕ್ಷಕ ಸಂಘದ ಪೂರ್ವಕಾರ್ಯಾಧ್ಯಕ್ಷ ಅಬ್ದುಲ್ ಖಾದರ್.ಎಂ., ಉಪಾಧ್ಯಕ್ಷೆ ಮಧುರಾ.ಕೆ., ಸಹಕಾರ್ಯದರ್ಶಿ ರವಿ.ಎಸ್., ಹಾಗೂ ಪೋಷಕರು, ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವೆರೋನಿಕಾ ಪ್ರಭಾ.ವಿ.ಪಿ 2023-2024ರ ಸಾಲಿನ ಲೆಕ್ಕಪತ್ರ ಮಂಡಿಸಿದರು. ದಿವ್ಯಶ್ರೀ.ಜಿ ಪ್ರಾರ್ಥಿಸಿದರು. ಡಾ.ಸೀತಾರಾಮ.ಪಿ.,ಸ್ವಾಗತಿಸಿದರು. ಚಂದ್ರಕಲಾ ವಂದಿಸಿದರು. ಪಾವನ.ರೈ ನಿರೂಪಿಸಿದರು.

Leave a Reply

error: Content is protected !!