ಭೀಕರ ರಸ್ತೆ ಅಪಘಾತ: ಅರಸಿನಮಕ್ಕಿ ಪುರುಷೋತ್ತಮ್ ಅಭ್ಯಂಕರ್ ರವರ ಪತ್ನಿ ಸುಮಂಗಳ ಮೃತ್ಯು

ಶೇರ್ ಮಾಡಿ

ಕೊಕ್ಕಡ: ಮಂಗಳೂರಿನಿಂದ ಕಾರ್ಕಳ ಮಾಳದತ್ತ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ನಂದಿಕೂರು ಮುದರಂಗಡಿ ಕ್ರಾಸ್ ಬಳಿ ನಡೆದಿದೆ.

ಮಾಳದಲ್ಲಿ ನಡೆಯುತ್ತಿದ್ದ ಉಪನಯನ ಸಮಾರಂಭದಲ್ಲಿ ಭಾಗವಹಿಸಲು ಮಂಗಳೂರು ಕಾವೂರಿನ ತಮ್ಮ ನಿವಾಸದಿಂದ ತೆರಳುತ್ತಿದ್ದರು. ಕಾರಿನಲ್ಲಿ ಪತಿ ಪುರುಷೋತ್ತಮ ಹಾಗೂ ಪತ್ನಿ ಸುಮಂಗಳ ಅವರು ಇಬ್ಬರು ಇದ್ದು, ಅಪಘಾತಕ್ಕೆ ಪತ್ನಿ ಸ್ಥಳದಲ್ಲೆ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಪುರುಷೋತ್ತಮ ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಇವರು ಮೂಲತಃ ಅರಸಿನಮಕ್ಕಿ ಸಮೀಪದ ಬೂಡುಮುಗೇರು ನಿವಾಸಿಯಾಗಿದ್ದು ಉದ್ಯೋಗದ ನಿಮಿತ್ತ ಮಂಗಳೂರಿನಲ್ಲಿ ವಾಸ್ತವ್ಯವಿದ್ದರು.

ಮೃತರು ಪತಿ ಪುರುಷೋತ್ತಮ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Leave a Reply

error: Content is protected !!