ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮತ ಚಲಾವಣೆ

ಶೇರ್ ಮಾಡಿ

ಬೋಳಿಯಾರ್ ಜಾರದಗುಡ್ಡೆ ರಂತಡ್ಕ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರು ಪತ್ನಿ ಲಾಮಿಸ್ ಖಾದರ್ ಹಾಗೂ ಪುತ್ರಿ ಅವ್ವಾ ನಸೀಮಾರೊಂದಿಗೆ ಬೆಳಗ್ಗೆ ಆಗಮಿಸಿ ಮತದಾನ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನ ನಮ್ಮ ಹಕ್ಕು. ಪ್ರತಿಯೊಬ್ಬ ಅರ್ಹ ಮತದಾರರು ನಿರುತ್ಸಾಹ ತೋರದೆ ಮತದಾನದ ಮೂಲಕ ತಮ್ಮ ಕರ್ತವ್ಯ ಪಾಲಿಸಬೇಕು. ಮತದಾನದಲ್ಲಿ ಎಲ್ಲರಿಗೂ ಸಮಾನ ಅವಕಾಶವಿರುತ್ತದೆ. ಶ್ರೀಮಂತನಿಗೂ ಒಂದೇ ಓಟು, ಬಡವನಿಗೂ ಒಂದೇ ಓಟು ಇರುತ್ತದೆ. ಆದ್ದರಿಂದ ಸಮಾನತೆಯ ಸಾಂವಿಧಾನಿಕ ಹಕ್ಕನ್ನು ಎಲ್ಲರೂ ಚಲಾಯಿಸಿ ಎಂದರು.

ಅಭಿವೃದ್ದಿಯಲ್ಲಿ ನಗರ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತದೆ. ಆದರೆ ನಗರ ಪ್ರದೇಶದಲ್ಲಿ ಮತ ಚಲಾವಣೆ ಕಡಿಮೆ ಎಂಬ ಆರೋಪವಿದೆ. ಅದ್ದರಿಂದ ನಗರ ಪ್ರದೇಶದ ಜನರೂ ಚುನಾವಣೆಯಲ್ಲಿ ಆಸಕ್ತಿಯೊಂದಿಗೆ ಮತ ಚಲಾಯಿಸಬೇಕು ಎಂದರು. ಈ ಸಂದರ್ಭದಲ್ಲಿ ಯು.ಟಿ.ಖಾದರ್ ಅವರ ಆಪ್ತ ಸಹಾಯಕ ಮುಹಮ್ಮದ್ ಲಿಬ್ಝತ್, ಕಾಂಗ್ರೆಸ್ ಮುಖಂಡ ಜಬ್ಬಾರ್ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

error: Content is protected !!