ಭಾರತೀಯ ಭೂಸೇನೆಯಲ್ಲಿ ಸುದೀರ್ಘ 28 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ದಿ. ಸೈನಿಕ ಗೋಪಿನಾಥನ್ ನಾಯರ್ ಹಾಗೂ ಲಕ್ಷ್ಮಿ ಕುಟ್ಟಿ ದಂಪತಿಯ ದ್ವಿತೀಯ ಪುತ್ರ ಸುಬೇದಾರ್ ಮಧು ಕುಮಾರ್ ಏಪ್ರಿಲ್ 30 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ .
26-04-1996 ರಲ್ಲಿ ಭೂಸೇನೆಗೆ ಸೇರಿದ ಇವರು ಬೆಂಗಳೂರಿನ ಸೇನಾ ವಿಭಾಗದ Army Service Corps Centre ನಲ್ಲಿ ತರಬೇತಿ ಮುಗಿಸಿ 01-02-1998 ರಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ಕರ್ತವ್ಯಕ್ಕೆ ನಿಯೋಜನೆ ಗೊಂಡಿದ್ದು ,ಆ ಬಳಿಕ ರಾಜಸ್ತಾನ ,ಅಸ್ಸಾಂ ,ಜಮ್ಮು ಕಾಶ್ಮೀರ,ಮೀರತ್ ,ಸಿಕಂದರಾಬಾದ್ ,ಲೇಹ್-ಲಡಾಖ್ ,ಪಶ್ಚಿಮ ಬಂಗಾಳ ಹಾಗೂ ಕೊನೆಯ ವರ್ಷದಲ್ಲಿ ಬೆಂಗಳೂರಿನ ಪ್ರಧಾನ ಕಚೇರಿಗಳಲ್ಲಿ ಒಳಗೊಂಡ ಕರ್ನಾಟಕ ಹಾಗೂ ಕೇರಳ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು .
ತಮ್ಮ ವೃತ್ತಿ ಜೀವನದಲ್ಲಿ 11 ನೇ ರಾಷ್ಟ್ರೀಯ ರೈಫಲ್ಸ್ ,Special Frontier Force ಹಾಗೂ Public relation office (Ministry of Defence),ಗುವಾಹಟಿ ಯಲ್ಲೂ ವಿಶೇಷ ಸೇವೆ ಸಲ್ಲಿಸಿದ್ದಾರೆ.1999 ರ ಕಾರ್ಗಿಲ್ ಯುದ್ಧದಲ್ಲಿ(6 Mountain Division,Sonamarg) ಶ್ರೀನಗರದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದರು.
ಇವರು 01-01-2017ರಲ್ಲಿ Junior commissioned officer (JCO) ಆಗಿ ಪದೋನ್ನತಿ ಪಡೆದರು .ಮಾಜಿ ಸೈನಿಕ ಮನೋಜ್ ಕುಮಾರ್ ಹಾಗೂ ಮಹೇಶ್ ಕುಮಾರ್ ಇವರ ಸಹೋದರರು.
ವೃತ್ತಿ ಸಲ್ಲಿಸಿ ನಿವೃತ್ತಿಗೊಳ್ಳಲಿರುವ ಸುಬೇದಾರ್ ಮಧು ಕುಮಾರ್ ಮಾನಡ್ಕರವರು ಪತ್ನಿ ಸರ್ಕಾರಿ ಶಿಕ್ಷಕಿ ಸುಷ್ಮಾ ಮಧು ಹಾಗೂ ಇಬ್ಬರು ಪುತ್ರಿಯರಾದ ಸಮನ್ವಿ ,ಮನಸ್ವಿರೊಂದಿಗೆ ವಾಸ್ತವ್ಯ ಹೊಂದಿದ್ದಾರೆ.