ನೆಲ್ಯಾಡಿ: ಆರ್ಥಿಕ ಸಂಕಷ್ಟದಲ್ಲಿರುವ ಬಡ ಮಹಿಳೆಗೆ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ

ಶೇರ್ ಮಾಡಿ

ನೆಲ್ಯಾಡಿ ಗ್ರಾಮದ ರಾಮನಗರ ದರ್ಖಾಸು ದಿ.ರಮೇಶ್ ಗೌಡ ರವರ ಪತ್ನಿ ಮೋಹಿನಿ ರವರ ಕುಟುಂಬಕ್ಕೆ ನೂತನ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲಾಯಿತು.

ವೈದಿಕ ವಿಧಿ ವಿಧಾನಗಳನ್ನು ಶ್ರೀ ಶಾಸ್ತರೇಶ್ವರ ದೇವಸ್ಥಾನ ಕುತ್ರಾಡಿ ಹಾರ್ಫಳ ಇದರ ಪ್ರಧಾನ ಅರ್ಚಕ ಶ್ರೀಧರ ನೂಜಿನ್ನಾಯ ರವರು ನೆರವೇರಿಸಿದರು. ನೂತನ ಮನೆ ಎಲ್ಲಾ ದಾನಿಗಳ ಮತ್ತು ಸಂಘ ಸಂಸ್ಥೆಗಳ ವಿಶೇಷ ಸಹಕಾರದೊಂದಿಗೆ ಅತ್ಯುತ್ತಮವಾಗಿ ಮೂಡಿ ಬರಲಿ ಶ್ರೀ ದೇವರು ಸಕಲ ಸೌಭಾಗ್ಯಗಳನ್ನು ಈ ಕುಟುಂಬಕ್ಕೆ ಒದಗಿಸಿ ಆಶೀರ್ವದಿಸಲಿ ಎಂದು ಪ್ರಾರ್ಥಿಸಿದರು.

ನೂತನ ಮನೆಯ ವಾಸ್ತು ವಿನ್ಯಾಸಗಾರ, ಇಂಜಿನಿಯರ್ ಮತ್ತು ಧಾರ್ಮಿಕ ಮುಖಂಡ ಶಿವಣ್ಣ ಹೆಗ್ಡೆ ರವರು ಶುಭಹಾರೈಸಿದರು. ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಅಮಿತ್ತಿಮಾರುಗುತ್ತು, ಕೌಕ್ರಾಡಿ ಗ್ರಾ.ಪಂ.ಸದಸ್ಯ ಉದಯಕುಮಾರ್ ಗೌಡ ಧೋಂತಿಲ, ನೆಲ್ಯಾಡಿ ಗ್ರಾ.ಪಂ.ಸದಸ್ಯ ರವಿಪ್ರಸಾದ ಶೆಟ್ಟಿ ರಾಮನಗರ, ಶ್ರೀ ಶಾಸ್ತ ರ ಫ್ರೆಂಡ್ಸ್ ಕುತ್ರಾಡಿ ಹಾರ್ಪಾಳ ಇದರ ಅಧ್ಯಕ್ಷ ಶಿವಪ್ರಸಾದ್ ದುಗ್ಗಲ, ಪ್ರಗತಿಪರ ಕೃಷಿಕರು ಸಾಮಾಜಿಕ ಮುಖಂಡ ಶಿವರಾಮ ಗೌಡ ಮಕ್ಕಿಗದ್ದೆ, ನೆಲ್ಯಾಡಿ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ದೇಜಪ್ಪ ಗೌಡ ರಾಮನಗರ, ಪ್ರಗತಿಪರ ಕೃಷಿಕ, ಸಾಮಾಜಿಕ ಮುಖಂಡ ರಮೇಶ ಗೌಡ ನಾಲ್ಗೊತ್ತು, ವಿನಾಯಕ ಭಜನಾ ಮಂಡಳಿ ರಾಮನಗರ ಇದರ ಮಾಜಿ ಅಧ್ಯಕ್ಷ ಸುಂದರ ಗೌಡ ಕಾನಮನೆ ಮನೆ, ನಿರ್ಮಾಣದ ಮೇಸ್ತ್ರಿ ಸುಕುಮಾರ ಗೌಡ, ದೇವಕಿ ಮೂಲೆಮನೆ, ಹಿರಿಯರಾದ ಕೃಷ್ಣಪ್ಪ ಗೌಡ ಮಕ್ಕಿಗದ್ದೆ ಉಪಸ್ಥಿತರಿದ್ದರು.

ಸಣ್ಣ ಪ್ರಾಯದಲ್ಲಿ ಗಂಡನನ್ನು ಕಳೆದುಕೊಂಡು ಸಣ್ಣ ಪ್ರಾಯದ ಎರಡು ಮಕ್ಕಳನ್ನು ಸಾಕುವ ಜವಾಬ್ದಾರಿಯನ್ನು ಹೊತ್ತುಕೊಂಡು ವಾಸ್ತವ್ಯದ ಮನೆ ಇಲ್ಲದೆ ನೂತನ ಮನೆ ನಿರ್ಮಾಣಕ್ಕೆ ಪ್ರಾರಂಭ ಮಾಡಿದ ಈ ಸಂದರ್ಭದಲ್ಲಿ ದಾನಿಗಳು ಮತ್ತು ಸಂಘ ಸಂಸ್ಥೆಗಳು ವಿಶೇಷ ಸಹಕಾರವನ್ನು ನೀಡಿ ತನ್ನ ಕುಟುಂಬಕ್ಕೆ ಆಸರೆಯನ್ನು ನೀಡಬೇಕಾಗಿ ಎಲ್ಲರಲ್ಲಿ ದೇವಕಿ ಮೂಲೆಮನೆ, ದಿ.ರಮೇಶ ಗೌಡ ರ ಪತ್ನಿ ಮೋಹಿನಿ ವಿನಂತಿಸಿ ವಂದಿಸಿದರು.

Leave a Reply

error: Content is protected !!