ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

ಶೇರ್ ಮಾಡಿ

ಚಲಿಸುತ್ತಿದ್ದ ಕೇರಳ ರಾಜ್ಯದ ಬಸ್ಸಿನ ಗಾಜು ಒಡೆದ ಪರಿಣಾಮ ಇಬ್ಬರು ಮಕ್ಕಳು ಮತ್ತು ಚಾಲಕ ಗಾಯಗೊಂಡ ಘಟನೆ ಉರಿಮಜಲು ಎಂಬಲ್ಲಿ ಶನಿವಾರ ಸಂಭವಿಸಿದೆ.

ಪುತ್ತೂರಿನಿಂದ ವಿಟ್ಲ ಮೂಲಕ ಕಾಸರಗೋಡಿಗೆ ಹೊರಟಿದ್ದ ಕೇರಳ ರಾಜ್ಯದ ಮಲಬಾರ್ ಬಸ್ ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಮುಂಭಾಗದ ಗಾಜು ಒಡೆದಿದೆ. ಇದರಿಂದ ಮುಂಭಾಗದಲ್ಲಿದ್ದ ಬಾಲಕ ಗಂಭೀರ ಗಾಯಗೊಂಡಿದ್ದು, ಚಾಲಕ ಮತ್ತು ಮತ್ತೊಂದು ಮಗುವಿಗೆ ಸಣ್ಣಪುಟ್ಟ ಗಾಯವಾಗಿದೆ.

ಗಂಭೀರ ಗಾಯಗೊಂಡ ಮಗುವನ್ನು ಪುತ್ತೂರು ಆಸ್ಪತ್ರೆ ಕೊಂಡೊಯ್ಯಲಾಗಿತ್ತು. ಗಂಭೀರ ಗಾಯಗೊಂಡಿರುವ ಬಾಲಕ ಕೇರಳದ ಚೆರ್ಕಳ ನೆಲ್ಲಿಕಟ್ಟೆ ನಿವಾಸಿ ಎಂದು ತಿಳಿದು ಬಂದಿದೆ. ಬಿಸಿಲಿನ ತಾಪಕ್ಕೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

Leave a Reply

error: Content is protected !!