ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

ಶೇರ್ ಮಾಡಿ

ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್‌ ಮಂಗಳವಾರ ರಾತ್ರಿ ನಿಧನ ಹೊಂದಿದರು.

ಅವರಿಗೆ 79 ವರ್ಷ ವಯಸ್ಸಾಗಿತ್ತು.ಸುಳ್ಯ ತಾಲೂಕಿನ ಪೆರುವಾಜೆಯ ಪುತ್ರಿಯ ಮನೆಯಲ್ಲಿದ್ದ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮೇ 7ರಂದು ಸಂಜೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆ ತರುತ್ತಿದ್ದ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರು.

ಮೃತರು ಪತ್ನಿ ಸುಮಾ ಆರ್‌. ಆಚಾರ್‌, ಉಪನ್ಯಾಸಕರಾಗಿರುವ ಪುತ್ರ ಹರ್ಷವರ್ಧನ, ಪುತ್ರಿಯರಾದ ಕಿರಣ ಪಿ.ಆರ್‌., ಉಪನ್ಯಾಸಕಿಯಾಗಿರುವ ಸುಪ್ರಿಯಾ ಪಿ.ಆರ್‌. ಅವರನ್ನು ಅಗಲಿದ್ದಾರೆ.

Leave a Reply

error: Content is protected !!