ನರ್ಸರಿ ಶಿಕ್ಷಕಿ ತರಬೇತಿ ಪಡೆದು ಶಿಕ್ಷಕಿಯಾಗಲು ಸುವರ್ಣ ಅವಕಾಶ

ಶೇರ್ ಮಾಡಿ

ನೆಲ್ಯಾಡಿ ಹಾಗೂ ಕಡಬದಲ್ಲಿ ಕಳೆದ 18 ವರ್ಷಗಳಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿಕೊಂಡು ಬರುತ್ತಿರುವ ಐಐಸಿಟಿ ಶಿಕ್ಷಣ ಸಂಸ್ಥೆಯಲ್ಲಿ ನರ್ಸರಿ ಶಿಕ್ಷಕಿಯರ ತರಬೇತಿ(DMED) ನಡೆಸುತ್ತಿದ್ದು. ಕೇಂದ್ರ ಸರಕಾರದ ಮಾನ ಸಂಪನ್ಮೂಲ ಯೋಜನೆ ಅಡಿ ಪ್ರಾಮಾಣಿಕೃತಗೊಂಡ ISO ಸರ್ಟಿಫೈಡ್ ಸರ್ಟಿಫಿಕೇಟ್ ಅನ್ನು ನೀಡಲಾಗುತ್ತದೆ.

ಒಂದು ವರುಷದ ಅವಧಿಯ ತರಬೇತಿ ಇದಾಗಿದ್ದು. ಪಿಯುಸಿ ಮತ್ತು ಇನ್ನಿತರ ಅರ್ಹತೆಯನ್ನು ಪಡೆದಂತಯ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಈ ಶಿಕ್ಷಕಿ ತರಬೇತಿಯನ್ನು ಪಡೆಯಬಹುದಾಗಿದೆ. ತರಬೇತಿ ಪೂರ್ಣಗೊಳಿಸಿದವರಿಗೆ ದೇಶ ವಿದೇಶಗಳಲ್ಲಿ ಬಹುಬೇಡಿಕೆ ಇದೆ.

ತರಬೇತಿಯು ದೈನಂದಿನ ತರಗತಿಗಳು, ವಾರದ ತರಗತಿಗಳು, ಆನ್ಲೈನ್ ತರಗತಿಗಳಾಗಿ ಮೂರು ವಿಧಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಉಚಿತ ಕಂಪ್ಯೂಟರ್ ಶಿಕ್ಷಣ, ಸ್ಪೋಕನ್ ಇಂಗ್ಲೀಷ್ ತರಬೇತಿ, ಕಲಿಕೆಗೆ ಸಂಬಂಧಪಟ್ಟ ವಿಶೇಷ ಶಿಬಿರಗಳು, ಶೈಕ್ಷಣಿಕ ತರಬೇತಿಗಳು, ಟೀಚಿಂಗ್ ಪ್ರಾಕ್ಟೀಸ್ ಮುಂತಾದ ವಿಶೇಷ ತರಗತಿಗಳನ್ನು ನೀಡುತ್ತಿದ್ದು. ಇದುವರೆಗೆ ಸಂಸ್ಥೆಯಲ್ಲಿ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿನಿಯರು ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜಾಬ್ ಗ್ಯಾರಂಟಿಯೊಂದಿಗೆ ನಮ್ಮ ಸಂಸ್ಥೆಯಲ್ಲಿ ತರಬೇತಿಯನ್ನು ನೀಡುತ್ತಿದ್ದೇವೆ. ಆಸಕ್ತರು ದಾಖಲಾತಿಗಾಗಿ ಐಐಸಿಟಿ ವಿದ್ಯಾ ಸಂಸ್ಥೆ, ಸೈಂಟ್ ಜೋಕಿಮ್ಸ್ ಬಿಲ್ಡಿಂಗ್ ಕಡಬ ಹಾಗೂ ಶಿಲಾಲ್ ಕಾಂಪ್ಲೆಕ್ಸ್ ನೆಲ್ಯಾಡಿ ಇವರನ್ನು ಸಂಪರ್ಕಿಸಬಹುದಾಗಿದೆ. ದಾಖಲಾತಿ ಆರಂಭಗೊಂಡಿದೆ ದೂರವಾಣಿ ಸಂಖ್ಯೆ 9448409912, 9743271502 ಸಂಪರ್ಕಿಸಬಹುದೆಂದು ಸಂಸ್ಥೆಯ ಪ್ರಕಟಣೆ ಮೂಲಕ ತಿಳಿಸಿದೆ.

Leave a Reply

error: Content is protected !!