ಉದನೆ ಮನೋಜ್ ಹೋಟೆಲ್ ಮಾಲಿಕ ಜೋಸೆಫ್ ನಿಧನ

ಶೇರ್ ಮಾಡಿ

ನೆಲ್ಯಾಡಿ: ಉದನೆ ಸಮೀಪದ ಕಳಪ್ಪಾರು ನಿವಾಸಿ ಉದನೆ ಮನೋಜ್ ಹೋಟೆಲ್ ಮಾಲಕ ಜೋಸೆಫ್ ಪುತ್ತನ್ ಪರಂಬಿಲ್(75.ವ) ಅಲ್ಪಕಾಲದ ಅನಾರೋಗ್ಯದಿಂದ ಏ.10ರ ಬೆಳಗ್ಗೆ 8.45ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕಳೆದ 40 ವರ್ಷಗಳಿಂದ ಉದನೆಯಲ್ಲಿ ಮನೋಜ್ ಎಂಬ ಹೆಸರಿನಲ್ಲಿ ಹೋಟೆಲ್ ಅನ್ನು ನಡೆಸುತ್ತಿದ್ದರು. ಅನಾರೋಗ್ಯದ ಕಾರಣದಿಂದಾಗಿ ಕೆಲವು ಸಮಯಗಳಿಂದ ವ್ಯವಹಾರವನ್ನು ನಿಲ್ಲಿಸಿದ್ದರು.

ಮೃತರು ಪತ್ನಿ ಮೇರಿ ಜೋಸೆಫ್, ಗಂಡು ಮಕ್ಕಳಾದ ನೆಲ್ಯಾಡಿಯ ತೋಮ್ಸನ್ ಎಲೆಕ್ಟ್ರಿಕಲ್ಸ್ ಮಾಲಕ ಮನೋಜ್, ಲೆಫ್ಟಿನೆಂಟ್ ಕರ್ನಲ್ ಆಗಿರುವ ವಿನೋಜ್, ಅನುರಾಜ್, ದುಬೈನಲ್ಲಿ ಇಂಜಿನಿಯರ್ ಆಗಿರುವ ಜಯರಾಜ್, ಪುತ್ರಿ ಬೆನಿಜಾ ಅವರನ್ನು ಅಗಲಿದ್ದಾರೆ

Leave a Reply

error: Content is protected !!