ಕಡಬ: ಹೃದಯ ಸಂಬಂಧಿ ಕಾಯಿಲೆಯಿಂದ ವಿದ್ಯಾರ್ಥಿ ನಿಧನ

ಶೇರ್ ಮಾಡಿ

ಕಡಬ ಸೈಂಟ್ ಆನ್ಸ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಗಗನ್ ಹೃದಯ ಸಂಬಂಧಿತ ತೊಂದರೆಯಿಂದ ಬಳಲುತ್ತಿದ್ದು, ಮೇ.14ರಂದು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆ ಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಮೃತ ಬಾಲಕ ಬಲ್ಯ ಗ್ರಾಮದ ಪಾಲ್ತಿಮಾರ್ ನಿವಾಸಿ ಗೋಪಾಲಕೃಷ್ಣ ಎಂಬವರ ಪುತ್ರ ಗಗನ್ ಎಂದು ಗುರುತಿಸಲಾಗಿದೆ.

ಗಗನ್‌ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

Leave a Reply

error: Content is protected !!