ಇಚ್ಲಂಪಾಡಿ : ಶಿಕ್ಷಕಿ ತಾರಾ ಟೀಚರ್(ಏಲಿಯಮ್ಮ. ಪಿ.ಸಿ) ನಿಧನ

ಶೇರ್ ಮಾಡಿ

ನೂಜಿಬಾಳ್ತಿಲ ಗ್ರಾಮದ ಅಡಿಂಜೆ ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ, ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಕೈಪುನಡ್ಕ ನಿವಾಸಿ ಏಲಿಯಮ್ಮ. ಪಿ.ಸಿ(58ವ.)(ತಾರಾ ಟೀಚರ್) ಅವರು ಮೇ 16ರಂದು ಸಂಜೆ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

1998ರಲ್ಲಿ ಹೊಸಮಜಲು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಆರಂಭಿಸಿದ್ದ ಎಲಿಯಮ್ಮ ಪಿ.ಸಿ. ಅವರು ಬಳಿಕ ಇಚ್ಲಂಪಾಡಿ ಗ್ರಾಮದ ನೇರ್ಲ ಶಾಲೆಗೆ ವರ್ಗಾವಣೆಗೊಂಡಿದ್ದರು. ಅಲ್ಲಿಂದ ನೂಜಿಬಾಳ್ತಿಲ ಗ್ರಾಮದ ಅಡಿಂಜೆ ಕಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಾಥಮಿಕ ಶಿಕ್ಷಣದಲ್ಲಿ ಬೆಳ್ಳಿಗ್ಗೆ 9 ರಿಂದ ಸಂಜೆ 4:30 ರ ವರೆಗೆ ಮಕ್ಕಳಿಗೆ ಶಾಲಾ ಜೀವನದಲ್ಲಿ ತಾಯಿಯಾಗಿದ್ದ ಎಲಿಯಮ್ಮ ಪಿ.ಸಿ.ಅವರು ತಾರಾ ಟೀಚರ್ ಎಂದೇ ಕರೆಸಿಕೊಳ್ಳುತ್ತಿದ್ದರು. ಸಾರ್ವಜನಿಕರ ಸಮಸ್ಯೆಗೆ ನಿಷ್ಕಲ್ಮಷವಾಗಿ ಸ್ಪಂದಿಸುತ್ತಿದ್ದ ಶಿಕ್ಷಕಿ .

ಮೃತರು ಪತಿ ಹಾಗೂ ಇಬ್ಬರು ಪುತ್ರಿ , ಓರ್ವ ಪುತ್ರನನ್ನು ಅಗಲಿದ್ದಾರೆ.

Leave a Reply

error: Content is protected !!