ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

ಶೇರ್ ಮಾಡಿ

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಮತ್ಸ್ಯಕ್ಷೇತ್ರವೆಂದೇ ಹೆಸರುವಾಸಿಯಾಗಿರುವ ಶಿಶಿಲದ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಆರಂಭಗೊಂಡಿದೆ.

ಮೇ.13ರ ರಾತ್ರಿ ವಾಸ್ತು ಬಲಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ಕಿಲಮರಿತ್ತಾಯ ನೇಮ, ಧ್ವಜಾರೋಹಣ ನಡೆಯಿತು. ಮೇ.14ರಂದು ಪೂರ್ವಾಹ್ನ ಪುಣ್ಯಾಹ, ಶಾಂತಿ ಹವನಗಳು, 12 ಕಾಯಿ ಗಣಯಾಗ, ರಾತ್ರಿ ಜೋಡು ನೇಮ, ಕುದುರೆಮುಖ ದೈವದ ನೇಮ, ಉಗ್ರಾಣ ತುಂಬಿಸುವುದು, ಅಂಕುರಾರ್ಪಣೆ, ದೇವರ ಉತ್ಸವ ಪ್ರಾರಂಭ, ಅಶ್ವತ್ಥಕಟ್ಟೆ ಪೂಜೆ. ಮೇ.15ರಂದು ಪೂರ್ವಾಹ್ನ ಅಂಗಣೋತ್ಸವ, ರಾತ್ರಿ ದೇವರ ಉತ್ಸವ, ಬೆಳ್ಳಿಕಟ್ಟೆ ಪೂಜೆ ಜರುಗಿತು.

ಮೇ.16ರಂದು ಪೂರ್ವಾಹ್ನ ಅಂಗಣೋತ್ಸವ, ರಾತ್ರಿ ಉತ್ಸವ, ಸವಾರಿ ಮಂಟಪ ಕಟ್ಟೆ ಪೂಜೆ, ಮೇ.17ರಂದು ಪೂರ್ವಾಹ್ನ ಅಂಗಣೋತ್ಸವ, ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು.

Leave a Reply

error: Content is protected !!