ಒಂದು ದೇಹ ಎರಡು ಜೀವ; ಮೂರು ಕಾಲು, ನಾಲ್ಕು ಕೈ, ಒಂದು ಶಿಶ್ನ ಸಯಾಮಿ ಅವಳಿ ಮಕ್ಕಳ ಜನನ

ಶೇರ್ ಮಾಡಿ

ಅವಳಿ ಮಕ್ಕಳು ಜನಿಸುವುದು ಸಾಮಾನ್ಯ ಸಂಗತಿಯಾಗಿದೆ. ಕೆಲವೊಮ್ಮೆ ಏಕಕಾಲಕ್ಕೆ ಮೂರು ಅಥವಾ ಐದು ಮಕ್ಕಳು ಜನಿಸಿದಂತಹ ಪ್ರಕರಣಗಳು ನಡೆದಿವೆ. ಇದೀಗ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಒಂದು ದೇಹ ಎರು ಜೀವ ಎಂಬಂತೆ ಮಹಿಳೆಯೊಬ್ಬರು ಮೂರು ಕಾಲು, ನಾಲ್ಕು ಕೈ ಹಾಗೂ ಒಂದು ಶಿಶ್ನವನ್ನು ಹೊಂದಿರುವ ಸಯಾಮಿ ಅವಳಿ ಮಕ್ಕಳಿಗೆ ಜನ್ಮವನ್ನು ನೀಡಿದ್ದಾರೆ.

ಡೈಲಿ ಮೇಲ್ ವರದಿಯ ಪ್ರಕಾರ ಈ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದ್ದು, ಇಲ್ಲಿನ ಮಹಿಳೆಯೊಬ್ಬರು 2018 ರಲ್ಲಿ ಇಶಿಯೋಪಾಗಸ್ ಟ್ರಿಪಸ್ ಕಂಜಾಯಿಂಡ್ ಟ್ವಿನ್ಸ್ ಎಂದು ಕರೆಯಲ್ಪಡುವ ಅಪರೂಪದ ಸಯಾಮಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇತ್ತೀಚಿಗೆ ಈ ಪ್ರಕರಣವನ್ನು ಅಮೇರಿಕನ್ ಜರ್ನಲ್ ಆಫ್ ಕೇಸ್ ರಿಪೋರ್ಟ್ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

ಸಾಮಾನ್ಯವಾಗಿ ಇಂತಹ ಸಯಾಮಿ ಅವಳಿ ಜನಿಸಿದರೆ ಶಿಶು ಸಾಯುವಂತಹ ಸಾಧ್ಯತೆಯಿರುತ್ತವೆ. ಆದರೆ ಈ ಅವಳಿ ಮಕ್ಕಳು ಆರೋಗ್ಯಕರವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಈ ಅವಳಿ ಮಕ್ಕಳು ಮೂರು ಕಾಲುಗಳು, ನಾಲ್ಕು ಕೈ ಹಾಗೂ ಒಂದು ಶಿಶ್ನ, ಒಂದು ಮೂತ್ರ ಕೋಶ, ಗುದನಾಳವನ್ನು ಹೊಂದಿದ್ದು, ಈ ಸ್ಥಿತಿಯಿಂದಾಗಿ ಈ ಅವಳಿ ಮಕ್ಕಳಿಗೆ ಕೂರಲು ಸಾಧ್ಯವಾಗದೆ 3 ವರ್ಷಗಳ ಕಾಲ ಹಾಸಿಗೆಯಲ್ಲಿಯೇ ಮಲಗಬೇಕಾಗಿತ್ತು. ಇತ್ತೀಚಿಗೆ ವೈದ್ಯರ ತಂಡವೊಂದು ಶಸ್ತ್ರ ಚಿಕಿತ್ಸೆಯ ಮೂಲಕ ಸಯಾಮಿ ಅವಳಿ ಮಕ್ಕಳ ಮೂರನೇ ಕಾಲನ್ನು ತೆಗೆದಿದ್ದಾರೆ. ಮತ್ತು ಸೊಂಟದ ಮೂಲೆಗಳನ್ನು ಸರಿಪಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿ, ಅವರು ಸರಿಯಾಗಿ ಕುಳಿತುಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ.

50 ಸಾವಿರದಿಂದ 2 ಲಕ್ಷ ಗರ್ಭಾಧಾರಣೆಗಳಲ್ಲಿ ಒಂದು ಇಂತಹ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಗರ್ಭಾಶಯದಲ್ಲಿ ಒಂದು ಫಲವತ್ತಾದ ಮೊಟ್ಟೆ ವಿಭಜನೆಗೊಂಡು ಎರಡು ಭಾಗವಾಗಿ ಬೆಳವಣಿಗೆ ಹೊಂದಲು ಆರಂಭಿಸಿದಾಗ ಸಯಾಮಿ ಅವಳಿ ಮಕ್ಕಳು ಜನಿಸುತ್ತವೆ.

Leave a Reply

error: Content is protected !!