ನೆಲ್ಯಾಡಿ- ರಾಮನಗರ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

ಶೇರ್ ಮಾಡಿ

ನೆಲ್ಯಾಡಿ ಗ್ರಾಮದ ರಾಮನಗರ ಅಮೆತ್ತಿಮಾರುಗುತ್ತು ಮನೆಯಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಒಂದರಿಂದ ಪದವಿವರೆಗಿನ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಜರಗಿತ್ತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಧಾರ್ಮಿಕ ಮುಖಂಡ ನೆಲ್ಯಾಡಿ ಸುಬ್ರಹ್ಮಣ್ಯ ವಿಲಾಸ ಹೋಟೆಲ್ ನ ಮಾಲಕರು ಸುಬ್ರಹ್ಮಣ್ಯ ಆಚಾರ್ಯರವರು ಮಕ್ಕಳಿಗೆ ವಿದ್ಯಾ ಬೆಳಕನ್ನು ಕೊಡುವ ಈ ಕಾರ್ಯಕ್ರಮ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಮಕ್ಕಳಲ್ಲಿ ವಿದ್ಯೆಯ ಬಗ್ಗೆ ಗೌರವ ಅಭಿಮಾನ ಮತ್ತು ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನು ಗಳಿಸುವಲ್ಲಿ ಇಂತಹ ಕಾರ್ಯಕ್ರಮ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡುತ್ತದೆ ಪ್ರತಿ ವರ್ಷ ಇಂತಹ ಪುಸ್ತಕ ವಿತರಣ ಕಾರ್ಯಕ್ರಮವನ್ನು ನಡೆಸುವುದರ ಮೂಲಕ ಮಕ್ಕಳ ಬಾಳಿಗೆ ಬೆಳಕಾಗಲಿ ಮತ್ತು ಮಕ್ಕಳಲ್ಲಿ ಸೇವಾ ಮನೋಭಾವ ಮತ್ತು ನಾವೆಲ್ಲ ಒಂದೇ ತಾಯಿಯ ಭಾರತಾಂಬೆಯ ಮಕ್ಕಳು ಎನ್ನುವ ದೇಶ ಪ್ರೇಮ ಜಾಗ್ರತವಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ಧಾರ್ಮಿಕ ಮುಖಂಡ ಮತ್ತು ಪುಸ್ತಕ ವಿತರಣೆಯ ದಾನಿಗಳಾದ ರಮೇಶ್ ಗೌಡ ನಾಲ್ಗೊತ್ತು ಶುಭ ಹಾರೈಸಿದರು.

ಕಳೆದ ಮೂರು ವರ್ಷಗಳಿಂದ ಪುಸ್ತಕ ವಿತರಣಾ ಕಾರ್ಯಕ್ರಮದ ಸಂಘಟಕ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಅಮೆತ್ತಿಮಾರುಗುತ್ತು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಾ ಇರುವ ಮಕ್ಕಳಿಗೆ ವಿಶೇಷ ಪ್ರೋತ್ಸಾಹದ ಮೂಲಕ ವಿದ್ಯೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮತ್ತು ಸೇವಾ ಮನೋಭಾವವನ್ನು ಜಾಗೃತಿಗೊಳಿಸುವ ಸಲುವಾಗಿ ಇಂತಹ ಕಾರ್ಯಕ್ರಮಗಳನ್ನು ಕಳೆದ ಮೂರು ವರ್ಷಗಳಿಂದ ನಡೆಸುತ್ತಾ ಬಂದಿದ್ದೇವೆ ವಿದ್ಯಾ ದಾನಿಗಳ ಮೂಲಕ ರೂ.30,000 ಮೌಲ್ಯದ ಉತ್ತಮ ಗುಣಮಟ್ಟದ ನೋಟ್ ಬುಕ್ ಗಳನ್ನು 100 ಮಕ್ಕಳಿಗೆ ವಿತರಣೆಯನ್ನು ಮಾಡಿದ್ದೇವೆ ಪುಸ್ತಕಗಳನ್ನು ತೆಗೆದುಕೊಳ್ಳುವಾಗ ಆ ಮುಗ್ಧ ಮಕ್ಕಳ ಮುಖದಲ್ಲಿ ಕಾಣುವ ಪರಿಶುದ್ಧ ನಗು ಈ ಕಾರ್ಯಕ್ರಮವನ್ನು ಪ್ರತಿ ವರ್ಷ ನಡೆಸಲು ಪ್ರೋತ್ಸಾಹವನ್ನು ನಮಗೆ ನೀಡುತ್ತದೆ ವಿಶೇಷವಾಗಿ ಮಕ್ಕಳ ಪೋಷಕರ ಭಾಗವಹಿಸುವಿಕೆ ನಮಗೆ ಅತ್ಯಂತ ಸಂತಸವನ್ನು ತಂದಿದೆ ಈ ಕಾರ್ಯಕ್ರಮವನ್ನು ನಿರಂತರ ನಡೆಸಲು ಶ್ರೀ ದೇವರು ಅನುಗ್ರಹವನ್ನು ನೀಡಲಿ ಎಂದು ಹೇಳಿದರು.

ಪುಸ್ತಕ ವಿತರಣಾ ಕಾರ್ಯಕ್ರಮದ ದಾನಿಗಳಾಗಿ ನೆಲ್ಯಾಡಿ ಸಿಎ ಬ್ಯಾಂಕನ ಉದ್ಯೋಗಿ ಮುದಲೆಗುತ್ತು ಮಹೇಶ್ ಗೌಡ ನೆಲ್ಯಾಡಿ, ಬಾಲಾಜಿ ಮೆಡಿಕಲ್ಸ್ ನ ಮಾಲಕ ಉದಯಕುಮಾರ್ ಭಟ್ ಮತ್ತು ಹೋಟೆಲ್ ಸುಬ್ರಮಣ್ಯ ವಿಲಾಸ ಮಾಲಕ ಸುಬ್ರಹ್ಮಣ್ಯ ಆಚಾರ್ಯ ಸಹಕರಿಸಿದ್ದರು.

Leave a Reply

error: Content is protected !!