ಶಬರಿಮಲೆ ಯಾತ್ರೆ ಸಂದರ್ಭ ಹೃದಯಾಘಾತದಿಂದ ಸಾವು

ಶೇರ್ ಮಾಡಿ

ಕಾಟಿಪಳ್ಳ ಗಣೇಶಪುರ ಬಳಿಯ ನಿವಾಸಿ ಸಂದೀಪ್‌ ಕಾಟಿಪಳ್ಳ (35) ಶಬರಿಮಲೆ ಯಾತ್ರೆ ಕೈಗೊಂಡಿದ್ದ ಸಂದರ್ಭ ಕೇರಳದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಶಬರಿಮಲೆಗೆ ಮಗನ ಹೆಸರಿನಲ್ಲಿ ಹೇಳಿಕೊಂಡಿದ್ದ ಹರಕೆ ಒಪ್ಪಿಸಲು ಶುಕ್ರವಾರ ತೆರಳಿದ್ದರು. ಶನಿವಾರ ಅಯ್ಯಪ್ಪ ಸನ್ನಿಧಿಯಲ್ಲಿ ಹದಿನೆಂಟು ಮೆಟ್ಟಿಲು ಹತ್ತುವಷ್ಟರಲ್ಲಿ ಹೃದಯಾಘಾತಕ್ಕೆ ಒಳಗಾದರು.

ಸಂದೀಪ್‌ ಅವರು ನಿತ್ಯಾನಂದ ಭಜನ ಮಂದಿರದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಸೇವಾಟ್ರಸ್ಟ್‌, ಕೇಸರಿ ಫ್ರೆಂಡ್ಸ್‌ ಸಹಿತ ಸಾಮಾಜಿಕ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದರು. ಎಂಆರ್‌ಪಿಎಲ್‌ನಲ್ಲಿ ಗುತ್ತಿಗೆ ಸೇವೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು.

Leave a Reply

error: Content is protected !!